ಮಹಿಳೆಯರು ಸದಾ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಅವರಿಗೆ ಪಾರ್ಲರಿಗೆ ಹೋಗಿ ಫೇಶಿಯಲ್ ಮಾಡಲು ಸಮಯವಿರುವುದಿಲ್ಲ. ಅಂತವರು ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಂಡು ಮುಖದ ಅಂದ ಹೆಚ್ಚಿಸಿಕೊಳ್ಳಿ.
ಮೊದಲಿಗೆ ಹಸಿ ಹಾಲಿಗೆ 3 ಹನಿ ಲೆಮನ್ ಎಸೆನ್ಸಿಯಲ್ ಆಯಿಲ್ ಅನ್ನು ಮಿಶ್ರಣ ಮಾಡಿ ಇದಕ್ಕೆ ಹತ್ತಿ ಉಂಡೆಗಳನ್ನು ಅದ್ದಿ ಅದರಿಂದ ಮುಖವನ್ನು ಚೆನ್ನಾಗಿ ಒರೆಸಿಕೊಳ್ಳಿ. ಬಳಿಕ ಮುಖದ ಮೇಲಿರುವ ಸತ್ತ ಚರ್ಮಕೋಶಗಳನ್ನು ತೆಗೆದು ಹಾಕಲು ಸ್ಕ್ರಬ್ ಮಾಡಿ. ಅದಕ್ಕೆ ಟೊಮೆಟೊ ಸ್ಲೈಸ್ ತೆಗೆದುಕೊಂಡು ಅದರ ಮೇಲೆ ಸಕ್ಕರೆ ಹರಡಿ ಮುಖವನ್ನು 10 ನಿಮಿಷ ಮಸಾಜ್ ಮಾಡಿ.
ಬೆಂಗಳೂರಿನ 10 ವರ್ಷದ ಪೋರನಿಗೆ ಒಲಿದ ಫೋಟೋಗ್ರಫಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ
ಆಮೇಲೆ ಆಲೂಗಡ್ಡೆ ಪೇಸ್ಟ್ ಗೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ. 20 ನಿಮಿಷದ ಬಳಿಕ ವಾಶ್ ಮಾಡಿ. ಕೊನೆಯಲ್ಲಿ 2 ಚಮಚ ಶ್ರೀಗಂಧದ ಪುಡಿಗೆ ಹಾಲು ಅಥವಾ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.