alex Certify ಬೆಂಗಳೂರಿನ 10 ವರ್ಷದ ಪೋರನಿಗೆ ಒಲಿದ ಫೋಟೋಗ್ರಫಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ 10 ವರ್ಷದ ಪೋರನಿಗೆ ಒಲಿದ ಫೋಟೋಗ್ರಫಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ

ಬೆಂಗಳೂರು ನಿವಾಸಿ ವಿದ್ಯುನ್​ ಆರ್.​ ಹೆಬ್ಬಾರ್ 2021ನೇ ಸಾಲಿನ​​ ಯಂಗ್​ ವೈಲ್ಡ್​ಲೈಫ್​ ಫೋಟೋಗ್ರಾಫರ್​ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಬಲೆಯಲ್ಲಿರುವ ಜೇಡರ ಹುಳುವಿನ ಫೋಟೋವನ್ನು ವಿದ್ಯುನ್​ ಸೆರೆಹಿಡಿದಿದ್ದರು. 10 ವರ್ಷ ವಯಸ್ಸಿನ ವಿದ್ಯುನ್​​ನ ಈ ಅತ್ಯದ್ಭುತ ಫೋಟೋಗೆ ಭರ್ಜರಿ ಗೌರವ ಸಂದಂತಾಗಿದೆ.

ನಿರ್ಣಾಯಕರ ಪೈಕಿ ಒಬ್ಬರಾದ ರೋಜ್​​ ಕಿಡ್ಮನ್​ ಈ ವಿಚಾರವಾಗಿ ಮಾತನಾಡಿದ್ದು, ಜೇಡರ ಹುಳುವನ್ನು ಈ ರೀತಿ ಸೆರೆ ಹಿಡಿಯಬೇಕು ಅನ್ನೋದು ಅನೇಕರ ಕಲ್ಪನೆಯಲ್ಲಿದೆ. ಈ ಚಿತ್ರವು ಫರ್ಫೆಕ್ಟ್​ ಆಗಿದೆ. ಸರಿಯಾದ ಜಾಗದಲ್ಲಿ ಬಾಲಕ ಫೋಕಸ್​ ಮಾಡಿದ್ದಾನೆ. ಗಾಡಿಯ ಚಲನೆಯಿಂದ ಬರುತ್ತಿದ್ದ ಬೆಳಕು ಕೂಡ ಈ ಚಿತ್ರವನ್ನು ಸಂಪೂರ್ಣವಾಗಿಸಿದೆ ಎಂದು ಹೇಳಿದ್ರು.

ಪ್ರಶಸ್ತಿಗೆ ಭಾಜನನಾದ ಬಳಿಕ ಮಾತನಾಡಿದ ವಿದ್ಯುನ್​ ಹೆಬ್ಬಾರ್​, ಗಾಡಿಗಳು ಪದೇ ಪದೇ ಸಂಚರಿಸುತ್ತಲೇ ಇದ್ದವು. ಅಲ್ಲದೇ ಜೇಡರ ಬಲೆ ಅಲುಗಾಡುತ್ತಲೇ ಇತ್ತು. ಹೀಗಾಗಿ ನನಗೆ ಈ ಫೋಟೋವನ್ನು ಕ್ಲಿಕ್ಕಿಸುವುದು ದೊಡ್ಡ ಚಾಲೆಂಜ್​ ಆಗಿತ್ತು ಎಂದು ಹೇಳಿದ್ದಾನೆ.

1965ರಿಂದ ಪ್ರತಿ ವರ್ಷ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ವರ್ಷವು ಲಂಡನ್​ನ ನ್ಯಾಚುರಲ್​ ಹಿಸ್ಟರಿ ಮ್ಯೂಸಿಯಂ ವತಿಯಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ವಿಶ್ವಾದ್ಯಂತ 50 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...