alex Certify ಸೀಬೆ ಎಲೆಯಲ್ಲಿದೆ ನೀಳ ಕೂದಲ ‘ಸೌಂದರ್ಯ’ದ ಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀಬೆ ಎಲೆಯಲ್ಲಿದೆ ನೀಳ ಕೂದಲ ‘ಸೌಂದರ್ಯ’ದ ಗುಟ್ಟು

ಕೂದಲು ಉದುರುವ ಸಮಸ್ಯೆಯನ್ನು ಅನುಭವಿಸದ ಮಹಿಳೆಯರು ಇರಲಿಕ್ಕಿಲ್ಲ. ಕೂದಲಿನ ವಿಷಯದಲ್ಲಿ ಮಹಿಳೆಯರು ಹೆಚ್ಚಾಗಿ ಬಯಸುವುದು ಉದ್ದವಾದ, ದಟ್ಟವಾದ, ಹೊಳಪಾದ ಕೂದಲನ್ನು. ಇದು ರಾಸಾಯನಿಕಯುಕ್ತ ಶ್ಯಾಂಪು ಎಣ್ಣೆಗಳಿಂದ ದೊರೆಯುವುದಿಲ್ಲ. ಇದರಿಂದ ಸಮಸ್ಯೆಗಳು ಹೆಚ್ಚುತ್ತವೆ.

ಸೀಬೆ ಅಥವಾ ಪೇರಳೆ ಹಣ್ಣಿನ ಗಿಡದ 15 ಎಲೆ ತೆಗೆದುಕೊಳ್ಳಿ. ಸ್ವಲ್ಪ ನೀರು ಹಾಕಿ 10 ನಿಮಿಷ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಈ ನೀರಿನಿಂದ ತಲೆಯನ್ನು ತೊಳೆಯಿರಿ. ಕೂದಲು ಸ್ವಲ್ಪ ಒಣಗಿದ ಮೇಲೆ ಬುಡದಿಂದ ಮೃದುವಾಗಿ ಮಸಾಜ್ ಮಾಡುತ್ತಾ ಬನ್ನಿ. ಯಾವುದೇ ಕಾರಣಕ್ಕೂ ಕೂದಲನ್ನು ಬಿಸಿ ನೀರಿನಿಂದ ತೊಳೆಯಬಾರದು. ನೀರು ಉಗುರು ಬೆಚ್ಚಗೆ ಇದ್ದರೆ ಸಾಕು. ಈ ನೀರನ್ನು ಬಳಸುವುದರಿಂದ ಕಂಡೀಷನರ್ ಅಗತ್ಯವಿಲ್ಲ.

ಚಿರತೆ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕಂದಮ್ಮ

ಇದನ್ನು ಬಳಸಿದ ಬಳಿಕ ಮತ್ತೆ ಶ್ಯಾಂಪು ಬಳಸದಿರಿ. ದಪ್ಪನೆಯ ಉದ್ದವಾದ ಕೂದಲು ಬೇಕೆಂದರೆ ಈ ರೀತಿ ನೀವು ವಾರದಲ್ಲಿ ಮೂರು ಬಾರಿ ತಪ್ಪದೇ ಮಾಡಬೇಕು. ಹೀಗೆ ಎರಡು ತಿಂಗಳುಗಳ ಸತತವಾಗಿ ಮಾಡಿದರೆ ನಿಮ್ಮ ಕೂದಲು ನೀಳವಾಗಿ ಬೆಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...