alex Certify ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ

ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಣ್ಣುತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುವುದು ಸಾಮಾನ್ಯ ಸಂಗತಿ. ಖಾಸಗಿ ಭೇಟಿ ವೇಳೆ ಎದುರಿಗೆ ಗುಂಪಾಗಿ ಸಿಗುವ ಅಭಿಮಾನಿಗಳ ಅತಿಯಾದ ಪ್ರೀತಿಯನ್ನು ಅರಗಿಸಿಕೊಳ್ಳುವುದು ಅವರಿಗೆ ಕಷ್ಟ. ಆದರೆ, ಸಾರ್ವಜನಿಕವಾಗಿ ಕಾಣಿಸಿಕೊಂಡು ತಮ್ಮ ಚಿತ್ರದ ಪ್ರಮೋಷನ್ ಮಾಡಲು ನಟರು ಸರ್ಕಸ್ ನಡೆಸುವುದು ಸಹ ಇದೆ.

ಇಷ್ಟೆಲ್ಲ ಪೀಠಿಕೆ ಏಕೆಂದರೆ, ನಟ ಅಮೀರ್ ಖಾನ್ ತಮ್ಮ ಮುಂಬರುವ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಪ್ರಚಾರಕ್ಕೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಚಿತ್ರ ಭಾರತದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದ್ದು, ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ಅಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ದ ವಿಶೇಷ ಪ್ರದರ್ಶನವನ್ನು ಮುಂಬೈನಲ್ಲಿ ಆಯೋಜಿಸಿದ್ದು, ಈ ವೇಳೆ ಅಮೀರ್ ಸಾರ್ವಜನಿಕರ ಸಮ್ಮುಖ ಗೋಲ್ಗಪ್ಪ ತಿಂದು ಸುದ್ದಿಯಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ಜುಹುದಲ್ಲಿ ಅವರ ಅಭಿಮಾನಿಗಳು ಸುತ್ತುವರೆದಿರುವಂತೆ ಅಮೀರ್ ಚಿತ್ರಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಅಮೀರ್ ಕೈಯಲ್ಲಿ ಗೋಲ್ಗಪ್ಪ ಹಿಡಿದು ನಗುತ್ತಿರುವಂತೆ ಕಾಣಿಸಿದೆ. ಒಬ್ಬ ಮಹಿಳೆ ಏನೋ ಹೇಳಿದಾಗ ಆತ ತಲೆಯಾಡಿಸಿದ್ದಾನೆ. ನಂತರ ಗೋಲ್ಗಪ್ಪ ಬಾಯಿಗೆ ಹಾಕಿಕೊಂಡು ಅದು ಚೆನ್ಮಾಗಿದೆ ಎಂದು ಸನ್ನೆ ಮಾಡಿದ್ದಾರೆ.

ಕೆಲವು ಫೋಟೋಗಳಲ್ಲಿ ಆತ ‘ಲಾಲ್ ಸಿಂಗ್ ಚಡ್ಡಾ’ ನಿರ್ದೇಶಕ ಅದ್ವೈತ್ ಚಂದನ್ ಅವರೊಂದಿಗೆ ತಬ್ಬಿಕೊಂಡು ಪೋಸ್ ನೀಡಿದ್ದಾರೆ.

Aamir Khan seen eating Pani Puri during Laal Singh Chaddha trailer preview -

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...