alex Certify ಸಿದ್ಧವಾಗಿದೆ ಭಾರತದ ಮೊದಲ RRTS ರೈಲು; ರಾತ್ರಿ ನಡೀತು ಪ್ರಾಯೋಗಿಕ ಸಂಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ಧವಾಗಿದೆ ಭಾರತದ ಮೊದಲ RRTS ರೈಲು; ರಾತ್ರಿ ನಡೀತು ಪ್ರಾಯೋಗಿಕ ಸಂಚಾರ

ಭಾರತದ ಮೊದಲ RRTS ರೈಲು ರಾತ್ರಿ ಪ್ರಾಯೋಗಿಕ ಸಂಚಾರ ನಡೆಸಿದೆ. ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್‌ನ ಮೊದಲ ಪ್ರಾಯೋಗಿಕ ಸಂಚಾರ ದೆಹಲಿ-ಗಾಝಿಯಾಬಾದ್‌ ಮಧ್ಯೆ ನಡೀತು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಲಾಗಿದೆ. ಈ ರಾಪಿಡ್‌ ರೈಲಿನ ಆಗಮನಕ್ಕಾಗಿ ಪ್ರಯಾಣಿಕರು ಕಾತರರಾಗಿದ್ದಾರೆ.

ಹೈ-ಸ್ಪೀಡ್ ಮತ್ತು ಹೈ-ಫ್ರೀಕ್ವೆನ್ಸಿ ಈ ಪ್ರಾದೇಶಿಕ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯ ವಿಶೇಷ. NCRTC ಇದನ್ನು ನಿರ್ಮಿಸುತ್ತಿದೆ. ದೆಹಲಿ ಮತ್ತು ಮೀರತ್ ಅನ್ನು, ಸರೈ ಕಾಲೇ ಖಾನ್-ಘಾಜಿಯಾಬಾದ್-ಮೀರತ್ RRTS ಕಾರಿಡಾರ್‌ ಮೂಲಕ ಸಂಪರ್ಕಿಸುತ್ತದೆ.

ಅಲ್‌ಸ್ಟೋಮ್‌ನಿಂದ ತಯಾರಿಸಲ್ಪಟ್ಟ ಈ ರೈಲನ್ನು, ಗುಜರಾತ್‌ನ ಸಾವ್ಲಿಯಿಂದ ಜೂನ್ 3 ರಂದು ಕಳುಹಿಸಲಾಗಿತ್ತು. 10 ದಿನಗಳ ಪ್ರಯಾಣದ ಬಳಿಕ ಇದು ರಾಜಧಾನಿ ದೆಹಲಿ ತಲುಪಿದೆ. ವಡೋದರಾ ಜಿಲ್ಲೆಯ ಸಾವ್ಲಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮೇ 7 ರಂದು ಆರ್‌ಆರ್‌ಟಿಎಸ್‌ನ ಮೊದಲ ರೈಲು ಸೆಟ್ ಅನ್ನು ಎನ್‌ಸಿಆರ್‌ಟಿಸಿಗೆ ಹಸ್ತಾಂತರಿಸಲಾಗಿತ್ತು. ಈ ರಾಪಿಡ್‌ ರೈಲಿನ ಸಂಚಾರಕ್ಕಾಗಿ ಈಗಾಗ್ಲೇ ಹಳಿಗಳನ್ನು ಹಾಕಲಾಗಿದೆ. ಡಿಪೋದಲ್ಲಿ ರೈಲಿನ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಆಡಳಿತ ಕಟ್ಟಡವನ್ನು ಸಹ ನಿರ್ಮಿಸಲಾಗಿದೆ.

ಆರ್‌ಆರ್‌ಟಿಎಸ್ ರೈಲುಗಳ ಪರೀಕ್ಷೆ ಮತ್ತು ನಿರ್ವಹಣೆಗಾಗಿ, 11 ಸ್ಟೇಬ್ಲಿಂಗ್ ಲೈನ್‌ಗಳು, ಎರಡು ವರ್ಕ್‌ಶಾಪ್ ಲೈನ್‌ಗಳು ಮತ್ತು ಮೂರು ಇಂಟರ್ನಲ್-ಬೇ ಲೈನ್‌ಗಳನ್ನು (ಐಬಿಎಲ್) ನಿರ್ಮಿಸಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಆರ್‌ಆರ್‌ಟಿಎಸ್ ರೈಲುಗಳನ್ನು ತಯಾರಿಸುವ ಗುತ್ತಿಗೆಯನ್ನು ಆಲ್‌ಸ್ಟೋಮ್‌ಗೆ ನೀಡಲಾಗಿದೆ. ಅದರ ಪ್ರಕಾರ ಮೀರತ್ ಮೆಟ್ರೋಗೆ 10 ಮೂರು ಬೋಗಿಗಳ ರೈಲು ಸೆಟ್‌ಗಳು ಸೇರಿದಂತೆ 40 ರೈಲು ಸೆಟ್‌ಗಳನ್ನು ಕಂಪನಿ ತಲುಪಿಸಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...