alex Certify ಸಿಖ್​​ ಸೈನಿಕರಿಗೆಂದೇ ವಿಶೇಷವಾಗಿ ನಿರ್ಮಾಣಗೊಂಡಿದೆ ‘ವೀರ್​’ ಹೆಲ್ಮೆಟ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಖ್​​ ಸೈನಿಕರಿಗೆಂದೇ ವಿಶೇಷವಾಗಿ ನಿರ್ಮಾಣಗೊಂಡಿದೆ ‘ವೀರ್​’ ಹೆಲ್ಮೆಟ್…​..!

ಭಾರತೀಯ ಸೇನೆಯು ದೇಶದ ಸಿಖ್​ ಸೈನಿಕರಿಗೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಯುದ್ಧ ಹೆಲ್ಮೆಟ್​ಗಳನ್ನು ತಯಾರಿಸಿದೆ. ಕಾನ್ಪುರ ಮೂಲದ ಗ್ಲೋಬಲ್​ ಡಿಫೆನ್ಸ್​ ಹಾಗೂ ಹೋಮ್​ಲ್ಯಾಂಡ್​ ಸೆಕ್ಯೂರಿಟಿ ಕಂಪನಿಯು ಉತ್ಪಾದಿಸಲಿರುವ ಹೆಲ್ಮೆಟ್​ಗಳು ಸೈನಿಕರಿಗೆ ಬ್ಯಾಲಿಸ್ಟಿಕ್​ ರಕ್ಷಣೆಯನ್ನು ಒದಗಿಸುತ್ತದೆ.

ಸಿಖ್​ ಸೈನಿಕರು ತಾವು ಸಾಂಪ್ರದಾಯಿಕವಾಗಿ ಧರಿಸುವ ಪೇಟಕ್ಕೆ ಯಾವುದೇ ತೊಂದರೆಯಾಗದಂತೆ ಈ ಹೆಲ್ಮೆಟ್​ ಧರಿಸಿಕೊಳ್ಳಬಹುದಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಅಷ್ಟೇ ಏಕೆ ಇಡೀ ವಿಶ್ವದಲ್ಲಿ ಸಿಖ್​​ ಸೈನಿಕರ ಅವಶ್ಯಕತೆಗೆ ಸರಿಹೊಂದುವಂತಹ ಯಾವುದೇ ಹೆಲ್ಮೆಟ್​ಗಳನ್ನು ವಿನ್ಯಾಸಗೊಳಿಸಲಾಗಿರಲಿಲ್ಲ.

ಈ ಹೆಲ್ಮೆಟ್​ಗಳಿಗೆ ಕಂಪನಿಯು ವೀರ್​​ ಅಥವಾ ಕಾರ್ವೊ SCH 111 T. ಎಂದು ಹೆಸರಿಟ್ಟಿದೆ. ಹೆಲ್ಮೆಟ್​ನ್ನು ಸ್ಮಾರ್ಟ್​ ವಿನ್ಯಾಸ ಮತ್ತು ತಂತ್ರಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ ಇದು ಸಿಖ್​​ ಸೈನಿಕರಿಗೆ ಬ್ಯಾಲಿಸ್ಟಿಕ್​ ರಕ್ಷಣೆಯನ್ನು ನೀಡುತ್ತದೆ.

ಹೆಲ್ಮೆಟ್‌ನ ವಿಶೇಷ ಆಕಾರವು ಅದನ್ನು ಸಿಖ್ ಸೈನಿಕರು ಧರಿಸುವ ‘ಬಟ್ಟೆ ಪಾಟ್ಕಾ’ದ ಮೇಲೆ ಧರಿಸಲು ಅನುವು ಮಾಡಿಕೊಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...