alex Certify ಸಿಎಂ ಬೆಂಗಾವಲಿಗಾಗಿ ಪ್ರವಾಸಿಗರಿಂದ ಬಲವಂತವಾಗಿ ಕಾರು ಪಡೆದ ಅಧಿಕಾರಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಬೆಂಗಾವಲಿಗಾಗಿ ಪ್ರವಾಸಿಗರಿಂದ ಬಲವಂತವಾಗಿ ಕಾರು ಪಡೆದ ಅಧಿಕಾರಿಗಳು…!

 

ಅಮರಾವತಿ: ರಸ್ತೆ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಅಧಿಕಾರಿಗಳು ಇತ್ತೀಚೆಗೆ ತಿರುಪತಿಗೆ ಹೊರಟಿದ್ದ ಕುಟುಂಬವನ್ನು ತಡೆದು ನಿಲ್ಲಿಸಿ, ಅವರ ಕಾರು ‘ಕಿತ್ತುಕೊಂಡು’ ಅದನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಅವರ ಬೆಂಗಾವಲಿಗೆ ಕಳುಹಿಸಿದ ಆರೋಪದಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಹಾಗೂ ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಮುಟ್ಟಿನ ಸಮಯದಲ್ಲಿನ ರಕ್ತಸ್ರಾವಕ್ಕೆ ʼಆಡುಸೋಗೆʼಯಲ್ಲಿದೆ ಮದ್ದು

ಸ್ಥಳೀಯ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಏ. 22ರಂದು ಒಂಗೋಲ್‌ ಗೆ ಮುಖ್ಯಮಂತ್ರಿಗಳ ಭೇಟಿ ನಿಗದಿಯಾಗಿತ್ತು. ಅವರ ಬೆಂಗಾವಲು ಪಡೆಯ ವಾಹನಗಳಲ್ಲಿ ಈ ಕ್ಯಾಬ್ ಮತ್ತು ಅದರ ಚಾಲಕನೂ ಇದ್ದರು. ತಕ್ಷಣವೇ ವರದಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಬುಧವಾರ ರಾತ್ರಿ ಸೂಚಿಸಿದ್ದರು.

ಈ ಕಾರಣಕ್ಕಾಗಿ ಪಾಲ್ನಾಡು ಜಿಲ್ಲೆಯ ವಿನುಕೊಂಡ ನಿವಾಸಿ ವೇಮುಲ ಶ್ರೀನಿವಾಸ ಹಾಗೂ ಅವರ ಕುಟುಂಬದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ರಾತ್ರಿಯಿಡೀ ಬಸ್ ನಿಲ್ದಾಣದಲ್ಲೇ ಕಳೆಯಬೇಕಾಯಿತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ, ಬಲವಂತವಾಗಿ ವಾಹನವನ್ನು ತರಿಸಿ, ಕುಟುಂಬವೊಂದಕ್ಕೆ ತೊಂದರೆ ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಜನರನ್ನು ತೊಂದರೆಗೆ ಸಿಲುಕಿಸುವ ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದೂ ಜಗನ್ ಹೇಳಿದ್ದಾರೆ.

ಸಿಎಂ ಆದೇಶ ಮಾಡಿ ಕೆಲವೇ ಗಂಟೆಗಳಲ್ಲಿ ಸಹಾಯಕ ಮೋಟಾರು ವಾಹನ ನಿರೀಕ್ಷಕಿ ಎ. ಸಂಧ್ಯಾ ಹಾಗೂ ಗೃಹರಕ್ಷಕ ಸಿಬ್ಬಂದಿ ಪಿ. ತಿರುಪತಿ ರೆಡ್ಡಿ ಅಮಾನತಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...