alex Certify ಸಾವಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್; ಇಬ್ಬರಿಗೆ ಪುನೀತ್ ಕಣ್ಣುಗಳು ಯಶಸ್ವಿ ಅಳವಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್; ಇಬ್ಬರಿಗೆ ಪುನೀತ್ ಕಣ್ಣುಗಳು ಯಶಸ್ವಿ ಅಳವಡಿಕೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಇಡೀ ಕರುನಾಡಿಗೆ ಆಘಾತತಂದಿದೆ. ಅಭಿಮಾನಿಗಳ ಆರಾದ್ಯ ದೈವ ಪುನೀತ್ ರಾಜ್ ಕುಮಾರ್ ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತನ್ನ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ.

ತಂದೆ ವರನಟ ಡಾ.ರಾಜ್ ಕುಮಾರ್ ಅವರ ಹಾದಿಯಲ್ಲೇ ಸಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನೇತ್ರದಾನ ಮಾಡಿದ್ದು, ಈ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ಇಬ್ಬರಿಗೆ ಅಳವಡಿಸಲಾಗಿದೆ.

ದನಗಳಿಗೆ ನೀರು ಕುಡಿಸಲು ಹೋದಾಗಲೇ ಕಾದಿತ್ತು ದುರ್ವಿಧಿ: ತಾಯಿ, ಮಗ ಸಾವು

ಪುನೀತ್ ಅವರ ಕಣ್ಣುಗಳನ್ನು ಇಬ್ಬರಿಗೆ ಅಳವಡಿಸುವ ಮೂಲಕ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಿನ್ನೆ ನಾರಾಯಣ ನೇತ್ರಾಲಯದ ವೈದರು ಪುನೀತ್ ಅವರ ಒಂದು ಕಣ್ಣನ್ನು ಒಬ್ಬರಿಗೆ ಅಳವಡಿಸಿದ್ದರು, ಇಂದು ಮತ್ತೊಬ್ಬರಿಗೆ ಒಂದು ಕಣ್ಣನ್ನು ಅಳವಡಿಸುವ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ಬಗ್ಗೆ ನಾರಾಯಣ ನೇತ್ರಾಲಯದ ವೈದ್ಯರು ನವೆಂಬರ್ 2ರಂದು ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...