alex Certify ಸಹಪಾಠಿಗಳ ಎದುರಲ್ಲೇ ವಿದ್ಯಾರ್ಥಿನಿಗೆ ಚುಂಬನ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಪಾಠಿಗಳ ಎದುರಲ್ಲೇ ವಿದ್ಯಾರ್ಥಿನಿಗೆ ಚುಂಬನ: ವಿಡಿಯೋ ವೈರಲ್​

ಟ್ರುತ್​ & ಡೇರ್​ ಎಂಬ ಆಟವನ್ನು ಆಡುತ್ತಿದ್ದ ವಿದ್ಯಾರ್ಥಿಯೊಬ್ಬ ಆಟದ ನಿಯಮದಂತೆ ತನ್ನ ಸಹಪಾಠಿಗೆ ಚುಂಬಿಸಿದ ಅಶ್ಲೀಲ ಘಟನೆಯು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸಂಭವಿಸಿದೆ.

ತರಗತಿಯಲ್ಲಿ ಪಾಠ ಕೇಳೋದನ್ನು ಬಿಟ್ಟು ಆಟವಾಡುತ್ತಿದ್ದ ವಿದ್ಯಾರ್ಥಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಸಹಪಾಠಿಗಳ ಎದುರಲ್ಲೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಲಿಪ್​ ಕಿಸ್​ ಮಾಡಿದ್ದಾರೆ. ಈ ಸಂಪೂರ್ಣ ದೃಶ್ಯವನ್ನು ಅಲ್ಲೇ ಇದ್ದ ಸಹಪಾಠಿಗಳು ತಮ್ಮ ಮೊಬೈಲ್​ ಕ್ಯಾಮರಾಗಳಲ್ಲಿ ರೆಕಾರ್ಡ್ ಮಾಡಿಕೊಂಡು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.‌

ವಿದ್ಯಾರ್ಥಿಗಳು ಚುಂಬಿಸಿಕೊಳ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದು ಯುವ ಜನತೆ ಹಾದಿ ತಪ್ಪುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ವಿಡಿಯೋ ವೈರಲ್​ ಆದ ಬಳಿಕ ಎಚ್ಚೆತ್ತ ಮಂಗಳೂರು ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...