alex Certify ಸಸ್ಯಾಹಾರಿ ಅಥವಾ ಮಾಂಸಾಹಾರಿ ಖಾದ್ಯದ ಸ್ವರೂಪ ಘೋಷಿಸಿ: ದೆಹಲಿ ಹೈಕೋರ್ಟ್‌ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಸ್ಯಾಹಾರಿ ಅಥವಾ ಮಾಂಸಾಹಾರಿ ಖಾದ್ಯದ ಸ್ವರೂಪ ಘೋಷಿಸಿ: ದೆಹಲಿ ಹೈಕೋರ್ಟ್‌ ಮಹತ್ವದ ಸೂಚನೆ 

ರೆಸ್ಟೋರೆಂಟ್‌ ಹಾಗೂ ಇತರೆಡೆಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಆಹಾರ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎಂಬುದನ್ನು ಸ್ಪಷ್ಟಪಡಿಸುವುದು ಮೂಲಭೂತ ಕರ್ತವ್ಯ ಅಂತಾ ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ತಮಗೆ ಸರ್ವ್‌ ಮಾಡಲಾಗಿರುವ ಫುಡ್‌ ನಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗಿದೆ ಅಂತಾ ಹೇಳಿದೆ.

ತಾವು ಏನು ಸೇವಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಹಾಗಾಗಿ ಪದಾರ್ಥಗಳ ತಯಾರಿಕೆಗೆ ಬಳಸಿರುವ ಎಲ್ಲಾ ವಸ್ತುಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುವುದು ಕಡ್ಡಾಯವೆಂದು 2021ರ ಡಿಸೆಂಬರ್‌ ನಲ್ಲೇ ನ್ಯಾಯಾಲಯ ತೀರ್ಪು ನೀಡಿತ್ತು.

ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ಡಿ.ಕೆ.ಶರ್ಮಾ ಅವರ ವಿಭಾಗೀಯ ಪೀಠ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನ್ಯಾಯಾಲಯದ ಆದೇಶದ ನಂತರ ಹೊರಡಿಸಿದ ಸೂಚನೆಯನ್ನು ಗಮನಿಸಿತು. ಇದು ಆಹಾರ ವ್ಯಾಪಾರ ನಿರ್ವಾಹಕರ ಮೇಲೆ ವಿಧಿಸಿರುವ ಜವಾಬ್ದಾರಿಯನ್ನು ಸ್ಪಷ್ಟವಾಗಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಹೊಸ ಸೂಚನೆ ನೀಡುವಂತೆ ಆದೇಶಿಸಿದ ಕೋರ್ಟ್‌, ದಿನಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಮಾಡುವಂತೆಯೂ ಹೇಳಿದೆ.  “ಲೇಬಲಿಂಗ್ ನಿಯಮಗಳ ಅಡಿಯಲ್ಲಿ, ಆಹಾರದಲ್ಲಿ ಶೇ.5ಕ್ಕಿಂತ ಕಡಿಮೆ ಇರುವ ಸಂಯುಕ್ತ ಪದಾರ್ಥಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲವೆಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗಂತ ಆಪರೇಟರ್‌ ಗಳು ಯಾವ ಪದಾರ್ಥವನ್ನು ಯಾವ ಪ್ರಮಾಣದಲ್ಲಿ ಹಾಕಲಾಗಿದೆ ಎಂಬುದನ್ನು ಅಧಿಕಾರಿಗಳಿಂದ ಮುಚ್ಚಿಡುವುಂತಿಲ್ಲ ಎಂದು ಹೇಳಿದೆ.

ಯಾವ ಪದಾರ್ಥಗಳನ್ನು ಯಾವುದರೊಂದಿಗೆ ಸಂಯೋಜಿಸಲಾಗಿದೆ, ಯಾವುದಾದರೂ ಪದಾರ್ಥ ಪ್ರಾಣಿಗಳ ಮೂಲದ್ದಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆ ಇರಬೇಕೆಂದು ಕೋರ್ಟ್‌ ಸೂಚಿಸಿದೆ. ಆಹಾರ ಪದಾರ್ಥಗಳು ಹಾಗೂ ಸೌಂದರ್ಯ ವರ್ಧಕಗಳಲ್ಲಿ ಯಾವ್ಯಾವ ಅಂಶಗಳಿವೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಕೋರಿ ರಾಮ್‌ ಗೌ ರಕ್ಷಕ ದಳ ಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಈ ಆದೇಶ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...