alex Certify ಸಲಿಂಗ ಕಾಮಿಯೇ ಪ್ರಿಯಾಂಕಾ ಛೋಪ್ರಾ ಪತಿ ? ಸಂದರ್ಶನದಲ್ಲಿ ನಿಕ್‌ ಮಾಜಿ ಗೆಳತಿ ಹೇಳಿದ್ದೇನು ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಿಂಗ ಕಾಮಿಯೇ ಪ್ರಿಯಾಂಕಾ ಛೋಪ್ರಾ ಪತಿ ? ಸಂದರ್ಶನದಲ್ಲಿ ನಿಕ್‌ ಮಾಜಿ ಗೆಳತಿ ಹೇಳಿದ್ದೇನು ?

ಹಾಲಿವುಡ್‌ ಸಂಗೀತ ಲೋಕದಲ್ಲಿ ನಿಕ್‌ ಜೋನಸ್‌ ಸಾಕಷ್ಟು ಹೆಸರು ಮಾಡಿದ್ದಾರೆ. ಬಾಲಿವುಡ್‌ನ ದೇಸಿ ಗರ್ಲ್‌ ಪ್ರಿಯಾಂಕಾ ಛೋಪ್ರಾರನ್ನು ಮದುವೆಯಾದ ಮೇಲಂತೂ ನಿಕ್‌ ಜೋನಸ್‌ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ನಿಕ್‌ ಹಾಗೂ ಪ್ರಿಯಾಂಕಾ ದಂಪತಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.

ನಿಕ್‌ ಜೋನಸ್‌ಗೆ ಪ್ರಿಯಾಂಕಾ ಮೊದಲ ಗೆಳತಿಯೇನಲ್ಲ. ಪ್ರಿಯಾಂಕಾರನ್ನು ಮದುವೆಯಾಗುವ ಮೊದಲು ನಿಕ್‌ ಜೋನಸ್‌ ಹಲವರೊಂದಿಗೆ ಡೇಟಿಂಗ್‌ ನಡೆಸಿದ್ದಾರೆ. ಸೆಲೆನಾ ಗೋಮ್ಜ್‌ ಕೂಡ ಅವರಲ್ಲೊಬ್ಬರು. ಸುಮಾರು ಒಂದು ವರ್ಷ ನಿಕ್‌ ಜೋನಸ್‌ ಹಾಗೂ ಸೆಲೆನಾ ಡೇಟಿಂಗ್‌ ನಲ್ಲಿದ್ದರು.

2009ರಲ್ಲಿ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. 2018ರಲ್ಲಿ ನಡೆದ ಸಂದರ್ಶನವೊಂದರಲ್ಲಿ ನಿಕ್‌ ಜೋನಸ್‌ ಸಲಿಂಗಕಾಮಿ ಹೌದೋ ಅಲ್ಲವೋ ಎಂಬದನ್ನು ಸೆಲೆನಾ ಬಹಿರಂಗಪಡಿಸಿದ್ದರು. ಸ್ಕ್ರೀಮ್‌ ಕ್ವೀನ್ಸ್‌ & ಕಿಂಗ್‌ಡಮ್‌ನಲ್ಲಿ ನಿಕ್‌ ಜೋನಸ್‌ ಸಲಿಂಗಕಾಮಿಯ ಪಾತ್ರ ಮಾಡಿದ್ದರು. ಈ ಕುರಿತಂತೆ ಚರ್ಚೆ ಮಾಡುತ್ತಲೇ ಸಂದರ್ಶಕರು ನಿಕ್‌ ಜೋನಸ್‌ ಸಲಿಂಗಕಾಮಿಯಾ ಅಂತ ಸೆಲೆನಾರನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಸೆಲೆನಾ ನಾನು ಆತನೊಂದಿಗೆ ಡೇಟಿಂಗ್‌ ನಡೆಸಿದ್ದೇನೆ, ಸೊನ್ನೆಯಂತೆ ಅಂತಾ ಉತ್ತರಿಸಿದ್ದಾರೆ. 2018ರಲ್ಲಿ ನಿಕ್‌ ಜೋನಸ್‌, ಪ್ರಿಯಾಂಕಾ ಛೋಪ್ರಾರನ್ನು ಮದುವೆಯಾಗಿದ್ದರು. ನಿಕ್‌ ಹಾಗೂ ಪ್ರಿಯಾಂಕಾ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವನ್ನೂ ಪಡೆದಿದ್ದಾರೆ. ಮದರ್ಸ್‌ ಡೇ ದಿನವೇ ಪ್ರಿಯಾಂಕಾ ತಮ್ಮ ಪುತ್ರಿ ಮಾಲತಿಯ ಮೊದಲ ಫೋಟೋವನ್ನು ಶೇರ್‌ ಮಾಡಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...