alex Certify ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಃಸ್ಥಿತಿ..? ಜನರಲ್​ ವಾರ್ಡ್​ ಬೆಡ್​ ಮೇಲೆ ಮಲಗಿದ ಬೀದಿ ನಾಯಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ದುಃಸ್ಥಿತಿ..? ಜನರಲ್​ ವಾರ್ಡ್​ ಬೆಡ್​ ಮೇಲೆ ಮಲಗಿದ ಬೀದಿ ನಾಯಿಗಳು..!

ಸರ್ಕಾರಿ ಆಸ್ಪತ್ರೆಯ ಬೆಡ್​ಗಳಲ್ಲಿ ನಾಯಿಗಳು ಮಲಗಿರುವ ಘಟನೆಯು ಬಿಹಾರದ ಸಿವಾನ್​ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸರ್ಕಾರಿ ಆಸ್ಪತ್ರೆಯ ಈ ದಾರುಣ ಸ್ಥಿತಿಯ ಬಗ್ಗೆ ನೆಟ್ಟಿಗರು ವಿಷಾದ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕೆಲವರು ಹಾಸಿಗೆಯ ಮೇಲೆ ಮಲಗಿದ್ದರೆ ಇನ್ನೂ ಕೆಲವರು ಹಾಸಿಗೆಯ ಮೇಲೆ ಕುಳಿತಿದ್ದಾರೆ. ಮತ್ತೊಂದೆಡೆ ನಾಯಿಗಳು ಕೂಡ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದಾಗಿದೆ.

ಸಿವಾನ್​ ಸದಾರ್​ ಆಸ್ಪತ್ರೆಯ ಜನರಲ್​ ವಾರ್ಡ್​ನಲ್ಲಿ ಕಂಡು ಬಂದ ದೃಶ್ಯಾವಳಿ ಇದಾಗಿದೆ. ಇದೇ ಆಸ್ಪತ್ರೆಯಲ್ಲಿ ಈ ಹಿಂದೆ ನಾಯಿಗಳು ರೋಗಿಗಳ ಆಹಾರವನ್ನು ಸೇವಿಸುತ್ತಿದ್ದ ಘಟನೆ ಕೂಡ ವರದಿಯಾಗಿತ್ತು.

ಆಸ್ಪತ್ರೆಯ ಈ ದಯನೀಯ ಪರಿಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿವಾನ್ ಸಿವಿಲ್​ ಸರ್ಜನ್​ ಡಾ. ವೈಕೆ ಶರ್ಮಾ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಇದೊಂದು ಹಳೆಯ ಸರ್ಕಾರಿ ಆಸ್ಪತ್ರೆಯಾಗಿದೆ. ಬಾಗಿಲು ಮುರಿದಿದ್ದರಿಂದ ನಾಯಿಗಳು ಹೀಗೆ ಜನರಲ್​ ವಾರ್ಡ್​ನೊಳಕ್ಕೆ ನುಗ್ಗಿವೆ. ಇಲ್ಲಿ ಹೊಸ ಆಸ್ಪತ್ರೆಯನ್ನು ನಿರ್ಮಿಸಬೇಕಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಮುರಿದು ಹೋದ ಬಾಗಿಲನ್ನು ಇಟ್ಟಿಗೆ, ಪ್ಲಾಸ್ಟರ್​​​ನಿಂದ ಮುಚ್ಚಿದ್ದೇವೆ ಎಂದು ಡಾ. ವೈ.ಕೆ ಶರ್ಮಾ ಹೇಳಿದರು.

— Prakash Kumar (@kumarprakash4u) February 12, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...