alex Certify ಸರೋವರದ ಪಕ್ಕ ರೀಲ್ಸ್ ಮಾಡಲು ಹೋಗಿ ಯುವತಿ ಎಡವಟ್ಟು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರೋವರದ ಪಕ್ಕ ರೀಲ್ಸ್ ಮಾಡಲು ಹೋಗಿ ಯುವತಿ ಎಡವಟ್ಟು……!

Viral Video: Girl Goes to Shoot Video Next to A Lake, Then This Funny Thing Happens | Watchಇಂಟರ್ನೆಟ್ ತಮಾಷೆ ಮತ್ತು ಆಸಕ್ತಿದಾಯಕ, ಮನರಂಜನೆಯ ವಿಡಿಯೋಗಳಿಂದ ತುಂಬಿದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ನಗೋದ್ರಲ್ಲಿ ಸಂಶಯವೇ ಇಲ್ಲ. ಹೌದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಗಳನ್ನು ಹಂಚಿಕೊಳ್ಳೋದು ಜಾಸ್ತಿಯಾಗುತ್ತದೆ. ಇಲ್ಲೊಬ್ಬಳು ರೀಲ್ ಮಾಡಲೋಗಿ ಎಟವಟ್ಟು ಮಾಡಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಸರೋವರದ ಬಳಿ ಯುವತಿಯೊಬ್ಬಳು ವಿಡಿಯೋವನ್ನು ಚಿತ್ರೀಕರಿಸುತ್ತಿದ್ದಳು. ತನ್ನ ರೀಲ್ ವಿಡಿಯೋವನ್ನು ಸೆರೆಹಿಡಿಯಲು ಯುವತಿ ಮೊಬೈಲ್ ಫೋನ್ ಅನ್ನು ಸಣ್ಣ ಸರೋವರದ ಬಳಿ ಟ್ರೈಪಾಡ್‌ನಲ್ಲಿ ಇರಿಸಿದ್ದಾಳೆ. ಅದರಲ್ಲಿಟ್ಟ ಬಳಿಕ ಆಕೆ ಹಿಂದೆ ತಿರುಗಿ ಸ್ಟೆಪ್ಸ್ ಹಾಕಿದ್ದಾಳೆ. ಆದರೆ, ಈ ವೇಳೆ ಟ್ರೈಪಾಡ್ ಸಹಿತ ಮೊಬೈಲ್ ನೀರಿಗೆ ಬಿದ್ದಿದೆ. ಆಕೆ ತನ್ನ ಸ್ಟೆಪ್ಸ್ ಮುಗಿಸಿ ಮೊಬೈಲ್ ತೆಗೆದುಕೊಳ್ಳಲು ಹಿಂದೆ ತಿರುಗಿದಾಗ ನೀರಿಗೆ ಬಿದ್ದಿರುವುದು ಅವಳಿಗೆ ಗೊತ್ತಾಗಿದೆ.

ಈ ವಿಡಿಯೋವನ್ನು ಮೊಬೈಲ್ ಫೋಟೋಗ್ರಫಿ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಯುವತಿಯ ಮೊಬೈಲ್ ಫೋನ್ ನೀರಿಗೆ ಬಿದ್ದ ಬಗ್ಗೆ ಅನೇಕರು ಆಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವು ಬಳಕೆದಾರರು ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...