alex Certify ಸಮುದ್ರದಲ್ಲಿ ಕತ್ತಲು ಎಷ್ಟು ಭಯಾನಕವಾಗಿರುತ್ತದೆ ಗೊತ್ತಾ..? ಟಿಕ್‍ ಟಾಕ್‍ನಲ್ಲಿ ವೈರಲ್ ಆಗಿರುವ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 10 ಮಿಲಿಯನ್ ಮಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಲ್ಲಿ ಕತ್ತಲು ಎಷ್ಟು ಭಯಾನಕವಾಗಿರುತ್ತದೆ ಗೊತ್ತಾ..? ಟಿಕ್‍ ಟಾಕ್‍ನಲ್ಲಿ ವೈರಲ್ ಆಗಿರುವ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 10 ಮಿಲಿಯನ್ ಮಂದಿ..!

ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲಿ ಬೇಕಾದರಲ್ಲಿ ಓಡಾಡುತ್ತಿದ್ದವರು ಕತ್ತಲಾಗುತ್ತಿದ್ದಂತೆ ಮನೆಯೊಳಗೆ ಸೇರಿ ಬಿಡುತ್ತಾರೆ. ಅವರಲ್ಲಿ ಇನ್ನೂ ಕೆಲವರು ಮನೆಯೊಳಗಿನ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ತೆರಳಲು ಭಯಪಡುತ್ತಾರೆ.

ಆದರೆ, ಇನ್ನೂ ಕೆಲವು ಮಂದಿ ಕತ್ತಲೆಯನ್ನು ಇಷ್ಟಪಡುತ್ತಾರೆ. ಕತ್ತಲೆಯ ಕೋಣೆಯಲ್ಲಿ ಮಲಗಲು ಅಥವಾ ಕತ್ತಲೆಯ ಕೋಣೆಯಲ್ಲಿ ಟಿವಿ ವೀಕ್ಷಿಸಲು ಇಷ್ಟಪಡುವ ಅನೇಕರಿದ್ದಾರೆ. ಆದರೆ, ನೀವು ರಾತ್ರಿಯಲ್ಲಿ ಸಮುದ್ರದ ಮಧ್ಯದಲ್ಲಿರುವಾಗ ಕತ್ತಲೆಯು ಯಾವ ರೀತಿಯಲ್ಲಿರುತ್ತದೆ ಎಂಬ ಬಗ್ಗೆ ನೋಡಿದ್ರೆ ಅಚ್ಚರಿ ಪಡ್ತೀರಾ..!

ತೈಲ ರಿಗ್ ಕಾರ್ಮಿಕನೊಬ್ಬ ಸಮುದ್ರದಲ್ಲಿ ಎಷ್ಟು ಭಯಾನಕ ಕತ್ತಲೆಯಾಗಬಹುದು ಎಂಬ ಬಗ್ಗೆ ವಿಡಿಯೋ ಮಾಡಿ ಟಿಕ್‌ಟಾಕ್ ನಲ್ಲಿ ಹಂಚಿಕೊಂಡಿದ್ದಾನೆ. ಅದರ ಕಿರು ವಿಡಿಯೊ ಈಗ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಅನೇಕರನ್ನು ಬೆಚ್ಚಿಬೀಳಿಸಿದೆ.

ರಿಗ್‌ನ ಡೆಕ್‌ಗಳು ಮತ್ತು ಹ್ಯಾಂಡ್‌ರೈಲ್‌ಗಳನ್ನು ವಿಡಿಯೋದಲ್ಲಿ ತೋರಿಸಿದ ನಂತರ, ಕ್ಯಾಮರಾ ಸಮುದ್ರವನ್ನು ತೋರಿಸಲು ಅತ್ತ ತಿರುಗುತ್ತದೆ. ಆದರೆ, ದೀಪಗಳನ್ನು ಅಳವಡಿಸಲಾಗಿರುವ ಕೆಳಗಿನ ಡೆಕ್ ಹೊರತುಪಡಿಸಿ ಎಲ್ಲವೂ ಕಪ್ಪು ಬಣ್ಣದಲ್ಲಿ ಕಾಣುತ್ತದೆ. ವಿಡಿಯೋ ವೀಕ್ಷಿಸಿದವರು ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. ರಾತ್ರಿಯಲ್ಲಿ ಸಮುದ್ರ ಎಷ್ಟು ಕತ್ತಲೆಯಾಗಿ ಕಾಣುತ್ತದೆ ಎಂದು ಆಶ್ಚರ್ಯಚಕಿತರಾಗಿ ಪೋಸ್ಟ್ ಮಾಡಿದ್ದಾರೆ.

BIG NEWS: ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಸಿದ್ಧತೆ

ಆಯಿಲ್ ರಿಗ್‌ನ ಡೆಕ್‌ಗಳನ್ನು ಹೊರತುಪಡಿಸಿ ಏನೂ ಗೋಚರಿಸದ ಕಾರಣ ಬಹುಶಃ ಚಂದ್ರನಿಲ್ಲದ ರಾತ್ರಿಯಲ್ಲಿ ವಿಡಿಯೋವನ್ನು ಚಿತ್ರೀಕರಿಸಿರಬಹುದು ಎನ್ನಲಾಗಿದೆ.

ಮತ್ತೊಂದು ವಿಡಿಯೋದಲ್ಲಿ ಟಿಕ್ ಟೋಕರ್, ಯಾವುದೇ ಮೇಲ್ಮೈ ಅಥವಾ ಸಮುದ್ರದ ಮೇಲೆ ಬೆಳಕನ್ನು ಬೆಳಗಿಸಬಹುದೇ ಎಂದು ನೋಡಲು ಬ್ಯಾಟರಿ ಬೆಳಕನ್ನು ಬಳಸುತ್ತಾರೆ. ಆದರೆ, ಬೆಳಕು ಏನನ್ನೂ ಪ್ರತಿಫಲಿಸುವುದಿಲ್ಲ.

ಇದೀಗ ಈ ವಿಡಿಯೋ 10 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿವೆ. ಈ ದೃಶ್ಯಗಳಿಂದ ಹಲವರು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದು, ಸಮುದ್ರವು ಇಷ್ಟು ಕತ್ತಲೆಯಾಗುತ್ತದೆ ಎಂಬುದು ತಿಳಿದಿರಲಿಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...