2 ಕಟ್ಟು ಸಬ್ಬಸಿಗೆ ಸೊಪ್ಪು , 1/2 ಕಪ್ ಹೆಸರು ಬೇಳೆ, 3- 4 ಹಸಿಮೆಣಸಿನಕಾಯಿ, 1/2 ಸ್ಪೂನ್ ಜೀರಿಗೆ , 1/2 ಸ್ಪೂನ್ ಧನಿಯಾ, 1 ಕಪ್ ತೆಂಗಿನಕಾಯಿ ತುರಿ, 1 ಸ್ಪೂನ್ ಸಾಸಿವೆ, ಇಂಗು, ಕರಿಬೇವು ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ಸಬ್ಬಸಿಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ಕುಕ್ಕರಿಗೆ ಹಾಕಿ ಅದಕ್ಕೆ ಹೆಸರುಬೇಳೆ, ಹಸಿಮೆಣಸು ಹಾಕಿ 1 ಕಪ್ ನೀರು ಹಾಕಿ ಕುಕ್ಕರಿನಲ್ಲಿ 2 ವಿಷಲ್ ಕೂಗಿಸಿಕೊಳ್ಳಿ. ಬೆಂದ ಬೇಳೆಗೆ ಸ್ವಲ್ಪ ಅರಶಿನ, ಉಪ್ಪು, ತೆಂಗಿನಕಾಯಿ ತುರಿ, ಜೀರಿಗೆ, ಧನಿಯಾ ಸೇರಿಸಿ ರುಬ್ಬಿಕೊಲಳ್ಳಿ, ರುಬ್ಬಿದ ಮಸಾಲೆ ಹಾಕಿ ಕುದಿಸಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಅದಕ್ಕೆ ಇಂಗು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ದಾಲ್ ಕುಕ್ಕರಿನ ಮಿಶ್ರಣಕ್ಕೆ ಹಾಕಿದರೆ ರುಚಿಕರವಾದ ಸಬ್ಬಸಿಗೆ ಸೊಪ್ಪಿನ ದಾಲ್ ಸವಿಯಲು ಸಿದ್ಧ.