alex Certify ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ ಮನೆಮದ್ದು ಈ ದಾಸವಾಳ ಹೂವಿನ ಚಹಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ ಮನೆಮದ್ದು ಈ ದಾಸವಾಳ ಹೂವಿನ ಚಹಾ

ಸಕ್ಕರೆ ಕಾಯಿಲೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬದಲಾಗ್ತಿರೋ ಜೀವನ ಶೈಲಿ ಹಾಗೂ ನಮ್ಮ ಆಹಾರ ಪದ್ಧತಿಯೇ ಈ ಕಾಯಿಲೆಗೆ ಮೂಲ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ದಾಸವಾಳದ ಚಹಾ ಸೇವನೆ ಮಾಡುವುದು ಸೂಕ್ತ. ದಾಸವಾಳದ ಟೀ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ದಾಸವಾಳದ ಹೂವುಗಳು ಮತ್ತು ಎಲೆಗಳಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್-ಸಿ ನಂತಹ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದು ನಿಮ್ಮ ದೇಹವನ್ನು ಸದೃಢವಾಗಿರಿಸುತ್ತದೆ. ಈ ಉತ್ಕರ್ಷಣ ನಿರೋಧಕಗಳು ನಿಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ನೀವು ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರೆ ದಾಸವಾಳ ಹೂವಿನ ಚಹಾ ಸೇವನೆ ಮಾಡಿ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮಾತ್ರವಲ್ಲ ಕೊಲೆಸ್ಟ್ರಾಲ್‌ ಅನ್ನು ಕೂಡ ಕಂಟ್ರೋಲ್‌ ಮಾಡಲು ದಾಸವಾಳದ ಚಹಾ ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿನ ಕೆಟ್ಟ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ. ಇನ್ನು ತೂಕ ಇಳಿಸಲು ಕೂಡ ದಾಸವಾಳ ಪ್ರಯೋಜನಕಾರಿ.

ದಾಸವಾಳ ಹೂವಿನ ಚಹಾ ಸೇವಿಸಿದ್ರೆ ನಿಮ್ಮ ಚಯಾಪಚಯ ಕ್ರಿಯೆ ಸುಲಭವಾಗುತ್ತದೆ. ಪರಿಣಾಮ ದೇಹದ ತೂಕ ಕೂಡ ಕಡಿಮೆಯಾಗುತ್ತದೆ. ದಾಸವಾಳ ಹೂವಿನ ಚಹಾ ಕುಡಿಯುವುದರಿಂದ ದೇಹದಲ್ಲಿನ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಯಾಕೆಂದರೆ ಇದರಲ್ಲಿ ಎಂಟಿಇನ್‌ಫ್ಲಮೇಟರಿ ಗುಣಗಳಿವೆ. ದಾಸವಾಳದ ಚಹಾ ಇನ್ನೂ ಹಲವು ರೋಗಗಳಿಗೆ ಮನೆಮದ್ದಾಗಿದೆ. ಆದರೆ ಈ ಚಹಾ ಸೇವನೆ ಆರಂಭಿಸುವ ಮುನ್ನ ಒಮ್ಮೆ ವೈದ್ಯರ ಸಲಹೆಯನ್ನೂ ಪಡೆಯುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...