alex Certify ಸಂದರ್ಶನ ಮಾಡುತ್ತಲೇ ರಿಷಬ್ ಕಾಲಿಗೆ ಬಿದ್ದ ಆಂಕರ್..! ಕಾರಣವೇನು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂದರ್ಶನ ಮಾಡುತ್ತಲೇ ರಿಷಬ್ ಕಾಲಿಗೆ ಬಿದ್ದ ಆಂಕರ್..! ಕಾರಣವೇನು ಗೊತ್ತಾ ?

ಕಾಂತಾರ ಸಿನಿಮಾ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇದೆ. ಕನ್ನಡ ಅಷ್ಟೆ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ಹಿಟ್ ಕೊಡಲು ರೆಡಿಯಾಗಿದೆ. ಇಂದಿನಿಂದ ಹಿಂದಿಯಲ್ಲೂ ಅಬ್ಬರ ಶುರು ಮಾಡಿದೆ ಕಾಂತಾರ. ಈ ಮೂಲಕ ಕನ್ನಡ ಇಂಡಸ್ಟ್ರಿಯನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋದ ಒಂದು ಕೀರ್ತಿ ರಿಷಬ್ ಗೆ ಸಲ್ಲುತ್ತಿದೆ. ಇದೀಗ ಮತ್ತೊಂದು ವಿಶೇಷ ನಡೆದಿದೆ. ಆಂಕರ್‌ ಒಬ್ಬ ಸಂದರ್ಶನ ಮಾಡುತ್ತಾ ರಿಷಬ್ ಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ.

ಹೌದು, ಇತ್ತೀಚೆಗೆ ನಡೆದ ಒಂದು ಸಂದರ್ಶನ ಇದೀಗ ದೊಡ್ಡ ಸುದ್ದಿ ಮಾಡ್ತಾ ಇದೆ. ಜನಪ್ರಿಯ ಯೂಟ್ಯೂಬರ್​ ಸೂರಜ್​ ಕುಮಾರ್​ ಅವರು ರಿಷಬ್ ಸಂದರ್ಶನ ನಡೆಸಿದ್ದಾರೆ.

ಸಂದರ್ಶನದ ವೇಳೆ ಅವರು ರಿಷಬ್​ ಶೆಟ್ಟಿಯ ಕಾಲಿಗೆ ಬಿದ್ದಿದ್ದಾರೆ. ಕಾಂತಾರ ಸಿನಿಮಾ ನೋಡಿ ಅವರು ಆ ಪರಿ ಭಾವುಕರಾಗಿದ್ದಾರೆ. ಸಂದರ್ಶನ ಶುರುಮಾಡುವುದಕ್ಕೂ ಮುನ್ನ ದಯವಿಟ್ಟು ನೀವು ಎದ್ದು ನಿಂತುಕೊಳ್ಳಿ ಸರ್​ ಎಂದು ರಿಷಬ್​ಗೆ ಸೂರಜ್​ ಹೇಳಿದರು. ನಂತರ ರಿಷಬ್​ ಶೆಟ್ಟಿಯನ್ನು ತಬ್ಬಿಕೊಂಡರು. ಅದೂ ಸಾಲದೆಂಬಂತೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು.

ನಾನು ತಮಾಷೆ ಮಾಡುತ್ತಿಲ್ಲ ಸರ್​. ಈ ರೀತಿ ನಾನು ಇದುವರೆಗೂ ಯಾರಿಗೂ ಮಾಡಿಲ್ಲ. ನಿಮ್ಮ ನಟನೆ ನೋಡಿ ನಾನು ಮೂಕ ವಿಸ್ಮಿತನಾದೆ. ನಾನು ತುಂಬಾ ಸಿನಿಮಾಗಳನ್ನು ನೋಡಿದ್ದೇನೆ. ಆದರೆ ಈ ಚಿತ್ರದ ಬಗ್ಗೆ ಹೇಳಲು ನನ್ನ ಬಳಿ ಪದಗಳೇ ಇಲ್ಲ. ನನ್ನ ಗರ್ಲ್​ಫ್ರೆಂಡ್​ಗಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಸೂರಜ್​ ಕುಮಾರ್​ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...