alex Certify ಶಕೀರಾಳ ‘ವಾಕಾ ವಾಕಾ’ಗೆ ರಸ್ತೆಯಲ್ಲಿ ಹಿರಿಯ ವ್ಯಕ್ತಿ ಸಖತ್ ಸ್ಟೆಪ್ಸ್: ಬೊಂಬಾಟ್ ಡಾನ್ಸ್ ಗೆ ಜನರ ಹರ್ಷೋದ್ಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಕೀರಾಳ ‘ವಾಕಾ ವಾಕಾ’ಗೆ ರಸ್ತೆಯಲ್ಲಿ ಹಿರಿಯ ವ್ಯಕ್ತಿ ಸಖತ್ ಸ್ಟೆಪ್ಸ್: ಬೊಂಬಾಟ್ ಡಾನ್ಸ್ ಗೆ ಜನರ ಹರ್ಷೋದ್ಗಾರ

ಹಿರಿಯ ವ್ಯಕ್ತಿಯೊಬ್ಬರು ಕೆಲವು ಕ್ಲಾಸಿಕ್ ಹಿಟ್‌ಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಬಹಳ ಉತ್ಸಾಹದಿಂದ ಕುಣಿಯುತ್ತಿದ್ದರೆ, ಅಲ್ಲಿ ನೆರೆದ ಜನರು ಹರ್ಷೋದ್ಗಾರ ಮಾಡಿದ್ದಾರೆ.

ಯುಕೆಯ ಸೌತ್‌ಪೋರ್ಟ್‌ನಲ್ಲಿ ವಯಸ್ಸಾದ ವ್ಯಕ್ತಿ ನೃತ್ಯ ಮಾಡಿದ್ದಾರೆ ಪ್ರೇಕ್ಷಕನೊಬ್ಬ ಈ ವಿಡಿಯೋವನ್ನು ರೆಕಾರ್ಡ್ ಮಾಡಿರುವಂತೆ ತೋರುತ್ತಿದೆ. ಗುಡ್‌ನ್ಯೂಸ್ ಮೂವ್‌ಮೆಂಟ್‌ನ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ವೈರಲ್ ವಿಡಿಯೋದಲ್ಲಿ ಹಿರಿಯ ವ್ಯಕ್ತಿ, ಮಕರೇನಾ ಮತ್ತು ಶಕೀರಾ ಅವರ ವಾಕಾ ವಾಕಾ ಸೇರಿದಂತೆ ಹಲವಾರು ಹಿಟ್ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಅವರು ತಮ್ಮ ಅಮೋಘ ನಡೆಗಳನ್ನು ಪ್ರದರ್ಶಿಸುತ್ತಿದ್ದಂತೆ, ಅವರನ್ನು ನೋಡುತ್ತಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದ್ದಾರೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬಳಿಕ ಭಾರಿ ಸದ್ದು ಮಾಡುತ್ತಿದೆ. ಇಂಟರ್ನೆಟ್ ಸಂಪೂರ್ಣವಾಗಿ ಈ ವಿಡಿಯೋವನ್ನು ಇಷ್ಟಪಟ್ಟಿದೆ. ವ್ಯಕ್ತಿಯ ಮನಮೋಹಕ ನೃತ್ಯ ಪ್ರದರ್ಶನ ಅಂತರ್ಜಾಲದ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...