alex Certify ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಣೆ ವೇಳೆ ಈ ತಪ್ಪು ಮಾಡಬೇಡಿ, ಶಿವ ಪ್ರಸನ್ನನಾಗುವ ಬದಲು ಕೋಪಗೊಳ್ಳಬಹುದು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಣೆ ವೇಳೆ ಈ ತಪ್ಪು ಮಾಡಬೇಡಿ, ಶಿವ ಪ್ರಸನ್ನನಾಗುವ ಬದಲು ಕೋಪಗೊಳ್ಳಬಹುದು…..!

ಶಿವನ ಭಕ್ತರಿಗೆ ಶ್ರಾವಣ ಮಾಸ ಬಹಳ ವಿಶೇಷವಾದದ್ದು. ಈ ಸಮಯದಲ್ಲಿ ಭಕ್ತರು ಭೋಲೆನಾಥನನ್ನು ಮೆಚ್ಚಿಸಲು  ಕಠಿಣ ವೃತ ಮತ್ತು ಪೂಜೆ ನೆರವೇರಿಸುತ್ತಾರೆ. ಈ ಸಮಯದಲ್ಲಿ ಶಿವನಿಗೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ ವ್ಯಕ್ತಿಯ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಶಿವಲಿಂಗಕ್ಕೆ ಜಲಾಭಿಷೇಕ, ರುದ್ರಾಭಿಷೇಕ ಇತ್ಯಾದಿಗಳನ್ನು ಮಾಡಲಾಗುತ್ತದೆ.

ಬಿಲ್ವಪತ್ರೆ ಶಿವನಿಗೆ ಪ್ರಿಯವಾದದ್ದು. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿದರೆ ಭಕ್ತರ ಇಷ್ಟಾರ್ಥ ನೆರವೇರುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ಆದರೆ ಬಿಲ್ವಪತ್ರೆಯನ್ನು ಅರ್ಪಿಸಲು ಶಾಸ್ತ್ರಗಳಲ್ಲಿ ಕೆಲವು ನಿಯಮಗಳಿವೆ. ಅದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಬಿಲ್ವಪತ್ರೆಯನ್ನು ಅರ್ಪಿಸುವಾಗ ಸಣ್ಣ ತಪ್ಪು ಮಾಡಿದರೂ ಅದು ಈಶ್ವರನ ಕೋಪಕ್ಕೆ ಕಾರಣವಾಗುತ್ತದೆ.

– ಶಿವಪುರಾಣದ ಪ್ರಕಾರ ಸೋಮವಾರ, ಚತುರ್ಥಿ, ಅಷ್ಟಮಿ, ನವಮಿ, ಚತುರ್ದಶಿ ಅಥವಾ ಅಮವಾಸ್ಯೆಯಂದು ಬಿಲ್ವಪತ್ರೆಯನ್ನು ಗಿಡದಿಂದ ಕೀಳಬಾರದು. ಪೂಜೆಯಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಲು ಬಯಸಿದರೆ ಅದನ್ನು ಒಂದು ದಿನ ಮುಂಚಿತವಾಗಿ ಕೀಳಬಹುದು.

– ಧರ್ಮಗ್ರಂಥಗಳ ಪ್ರಕಾರ ಬಿಲ್ವಪತ್ರೆಯನ್ನು ಎಂದಿಗೂ ಕೊಂಬೆಯಿಂದ ಮುರಿಯಬಾರದು. ಯಾವಾಗಲೂ ಮೂರು ಎಲೆಗಳ ಕಾಂಡವನ್ನು ಒಡೆದು ಶಿವಲಿಂಗಕ್ಕೆ ಅರ್ಪಿಸಬೇಕು.

– ಶಿವನಿಗೆ 3 ರಿಂದ 11 ಬಿಲ್ವಪತ್ರೆಯನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಹಾಕುವಾಗ ನಯವಾದ ಭಾಗವು ಶಿವಲಿಂಗದ ಮೇಲೆ ಇರಬೇಕು.

– ಶಿವಪುರಾಣದ ಪ್ರಕಾರ ಬಿಲ್ವಪತ್ರೆ ಎಂದಿಗೂ ಹಳೆಯದಾಗುವುದಿಲ್ಲ. ಆದ್ದರಿಂದ ಬೇರೆಯವರು ಅರ್ಪಿಸಿದ್ದನ್ನೂ ತೊಳೆದು ಮತ್ತೆ ಹಾಕುವ ಅವಕಾಶವಿದೆ.

– ಶಿವಲಿಂಗದ ಮೇಲೆ ಕತ್ತರಿಸಿದ ಬಿಲ್ವಪತ್ರೆಯನ್ನು ಹಾಕುವಂತಿಲ್ಲ. ಅಥವಾ ಅದನ್ನು ಹರಿಯಬಾರದು. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಹಾಕುವಾಗ ನೀರಿನ ತೊರೆಯನ್ನೂ ಅರ್ಪಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...