alex Certify ಶಿವಮೊಗ್ಗಕ್ಕೆ ಹೋದರೆ ಈ ಸ್ಥಳಗಳನ್ನು ಮಿಸ್ ಮಾಡದೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗಕ್ಕೆ ಹೋದರೆ ಈ ಸ್ಥಳಗಳನ್ನು ಮಿಸ್ ಮಾಡದೆ ನೋಡಿ

ನಮ್ಮ ಕರ್ನಾಟಕದ ಸುಂದರ ಸ್ಥಳಗಳಲ್ಲೊಂದು ಶಿವಮೊಗ್ಗ. ಇದರ ನೈಸರ್ಗಿಕ ಚೆಲುವು ನೋಡುಗರನ್ನು ಕೈ ಬೀಸಿ ಕರೆಯುತ್ತದೆ. ಶಿವಮೊಗ್ಗ ‘ಗೇಟ್ ವೇ ಟು ಮಲ್ನಾಡ್’ ಎಂದೇ ಪ್ರಸಿದ್ಧ. ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಈ ಸುಂದರ ತಾಣದ ಪ್ರಮುಖ ಪ್ರವಾಸಿ ತಾಣಗಳು ಹೀಗಿವೆ.
ಕೊಡಚಾದ್ರಿ‌

ಕೊಡಚಾದ್ರಿ ಕರ್ನಾಟಕದ ಹತ್ತನೇ ಅತಿ ಎತ್ತರದ ಶಿಖರ. ಇದು ಟ್ರಕ್ಕಿಂಗ್ ಗೆ ಫೇಮಸ್ ಆಗಿದೆ.

ಹೊನ್ನೆಮರಡು

ಇದು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಊರು. ಇದರ ನಿಸರ್ಗ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಪಕ್ಷಿ ಪ್ರಿಯರ ಸ್ವರ್ಗ.

ಜೋಗ ಜಲಪಾತ

ಅತೀ ಎತ್ತರದಿಂದ ಧುಮ್ಮಿಕ್ಕುವ ಜೋಗ ಜಲಪಾತದ ಸೌಂದರ್ಯವನ್ನು ನೋಡುವುದೇ ಚೆಂದ. ರಾಜ, ರಾಣಿ, ರಾಕೆಟ್ ಮತ್ತು ರೋರರ್ ನಾಲ್ಕು ದಿಕ್ಕುಗಳಿಂದ ಧುಮ್ಮಿಕ್ಕುತ್ತಿರುವ ಆ ಚೆಲುವನ್ನು ನೋಡಲು ಕಣ್ಣುಗಳೇ ಸಾಲದು.

BIG NEWS: ಏಪ್ರಿಲ್ 27ರ ಬಳಿಕ ರಾಜ್ಯದಲ್ಲಿ ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್….?

ಕುಂದಾದ್ರಿ

ಸಮುದ್ರ ತೀರದಿಂದ 3,200 ಅಡಿ ಎತ್ತರದಲ್ಲಿರುವ ಕಲ್ಲು ಇಲ್ಲಿಯ ಪ್ರಮುಖ ಆಕರ್ಷಣೆ. ಇಲ್ಲೊಂದು ಅತ್ಯಾಕರ್ಷಕ ಜೈನ ದೇವಾಲಯವಿದ್ದು, ಇದನ್ನು 17ನೇ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ.

ಸಕ್ಕರೆಬೈಲು

ಇದೊಂದು ಆನೆ ಕ್ಯಾಂಪ್ ಆಗಿದ್ದು, ಇಲ್ಲಿಗೆ ಬಹಳಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...