alex Certify ಶಿರಡಿ ಸಾಯಿಬಾಬಾನ ಸನ್ನಿಧಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿರಡಿ ಸಾಯಿಬಾಬಾನ ಸನ್ನಿಧಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ

ಸಧ್ಯ ಗಾಳಿಪಟ 2 ಸಿನಿಮಾ ಬಿಡುಗಡೆಯ ಹಿನ್ನೆಲೆ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಬ್ಯುಸಿ ಶೆಡ್ಯೂಲ್​ನ ನಡುವೆಯೂ ಬಿಡುವು ಮಾಡಿಕೊಂಡು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಚಂದನವನದಲ್ಲಿ ಗಾಳಿಪಟ 2, ದಸರಾ ಹಾಗೂ ಮಂಡಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ಶಿರಡಿ ಸಾಯಿ ಬಾಬಾನ ದರ್ಶನವನ್ನು ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಶ್ವೇತ ವರ್ಣದ ಕುರ್ತಾ ಹಾಗೂ ದುಪ್ಪಟ್ಟಾ ಧರಿಸಿರುವ ನಟಿ ಶರ್ಮಿಳಾ ದೇವತೆಯಂತೆ ಕಾಣ್ತಿದ್ದಾರೆ.

ದೇವಸ್ಥಾನದ ಹೊರಗೆ ನಿಂತು ಫೋಟೋ ಕ್ಲಿಕ್ಕಿಸಿರುವ ಶರ್ಮಿಳಾ ಇನ್​ಸ್ಟಾಗ್ರಾಂನಲ್ಲಿ ಶಿರಡಿ ಸಾಯಾಬಾಬಾ ಮಂದಿರ ವಿಸಿಟ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಿರಡಿಯಲ್ಲಿ ಅದ್ಭುತ ದರ್ಶನವಾಯಿತು, ಓಂ ಸಾಯಿರಾಮ್​ ಎಂದು ಬರೆದುಕೊಂಡಿದ್ದಾರೆ.‌

ಸಜನಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿರುವ ನಟಿ ಶರ್ಮಿಳಾ ಮಾಂಡ್ರೆ ಧ್ಯಾನ್​​ಗೆ ನಾಯಕಿಯಾಗಿ ನಟಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...