alex Certify ಶಿಕ್ಷಣ ಪಡೆಯಲು ವಯಸ್ಸಿನ ಅಡ್ಡಿಯಿಲ್ಲ: 88ನೇ ವಯಸ್ಸಿನಲ್ಲಿ ಪದವಿ ಪೂರೈಸಿದ ವ್ಯಕ್ತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಣ ಪಡೆಯಲು ವಯಸ್ಸಿನ ಅಡ್ಡಿಯಿಲ್ಲ: 88ನೇ ವಯಸ್ಸಿನಲ್ಲಿ ಪದವಿ ಪೂರೈಸಿದ ವ್ಯಕ್ತಿ…..!

ನ್ಯೂಯಾರ್ಕ್‌: ಶಿಕ್ಷಣ ಪಡೆಯಲು ವಯಸ್ಸು ಎಂದಿಗೂ ಅಡ್ಡಿಯಾಗಲಾರದು. ಇದನ್ನು ಹಲವಾರು ಮಂದಿ ಸಾಬೀತುಪಡಿಸಿದ್ದಾರೆ. ಇದೀಗ ಅನಿವಾರ್ಯ ಕಾರಣಗಳಿಂದ ಓದು ಪೂರ್ಣಗೊಳಿಸಲು ಸಾಧ್ಯವಾಗದ್ದನ್ನು, ಆರು ದಶಕಗಳ ನಂತರ 88 ವರ್ಷದ ವೃದ್ಧರೊಬ್ಬರು ಸಾಧಿಸಿ ತೋರಿಸಿದ್ದಾರೆ.

ಜಾನ್ ಲೆನೆಹನ್ ಎಂಬ 88 ವರ್ಷ ವಯಸ್ಸಿನ ವ್ಯಕ್ತಿ ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಕೊರಿಯನ್ ಯುದ್ಧದ ಅನುಭವಿಯಾಗಿರುವ ಲೆನೆಹನ್ ಕಳೆದ ವಾರಾಂತ್ಯದಲ್ಲಿ ತಮ್ಮ ಪದವಿ ಕ್ಯಾಪ್ ಮತ್ತು ಗೌನ್‌ಗಳನ್ನು ಹರ್ಷಚಿತ್ತದಿಂದ ಧರಿಸಿ, ಇತರ ಯುವಕರೊಂದಿಗೆ ತಮ್ಮ ಪ್ರಮಾಣಪತ್ರವನ್ನು ಪಡೆದಿದ್ದಾರೆ.

1956 ರಲ್ಲಿ ಉದ್ಯೋಗ ಸಿಕ್ಕಿದ್ದಕ್ಕೆ ಅವರು ಕಾಲೇಜಿನಿಂದ ಹೊರಗುಳಿಯಬೇಕಾಯಿತು. ತನ್ನ 86 ನೇ ವಯಸ್ಸಿನಲ್ಲಿ ಒಂದು ದಿನ ಲೆನೆಹನ್ ತನ್ನ ಹೆಂಡತಿ ಬಳಿ ತಾನು ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿ, ಓದನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ರು.

ಆರು ಮಕ್ಕಳು ಮತ್ತು 13 ಮೊಮ್ಮಕ್ಕಳನ್ನು ಹೊಂದಿರುವ ಇವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ನೀವು ಪ್ರಾರಂಭಿಸಿದ ಕೆಲಸವನ್ನು ಪೂರ್ಣಗೊಳಿಸಲು ಇದು ಎಂದಿಗೂ ತಡವಾಗಿಲ್ಲ. ಅದು ನಿಮ್ಮ ವೈಯಕ್ತಿಕ ಜೀವನವಾಗಲಿ, ನಿಮ್ಮ ವ್ಯವಹಾರ ಜೀವನವಾಗಲಿ ಅಥವಾ ನಿಮ್ಮ ವೃತ್ತಿಪರ ಜೀವನವಾಗಲಿ.. ನೀವು ಏನನ್ನಾದರೂ ಪ್ರಾರಂಭಿಸಿದರೆ ಮತ್ತು ನೀವು ಅದನ್ನು ನಿಜವಾಗಿಯೂ ಪೂರ್ಣಗೊಳಿಸದಿದ್ದರೆ, ಅದನ್ನು ಮಾಡಿ ತೋರಿಸಿ ಎಂದು ಲೆನೆಹನ್ ತಿಳಿಸಿದ್ದಾರೆ.

ಲೆನೆಹಾನ್ ಒಂದು ದಶಕಕ್ಕೂ ಹೆಚ್ಚು ಕಾಲ ವಿಮಾನಯಾನ ಕಂಪನಿಯೊಂದಿಗೆ ಕೆಲಸ ಮಾಡಿದ್ದರು. ಲೆನೆಹಾನ್ ಅವರ ಈ ಕಥೆಯು ಅನೇಕ ಇಂಟರ್ನೆಟ್ ಬಳಕೆದಾರರಿಗೆ ಸ್ಫೂರ್ತಿ ತುಂಬಿದೆ. ಸರಿಯಾದ ಕೆಲಸವನ್ನು ಮಾಡಲು ಇದು ಎಂದಿಗೂ ತಡವಾಗಿಲ್ಲ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...