alex Certify ಶಿಕ್ಷಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿದ್ಯಾರ್ಥಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿದ್ಯಾರ್ಥಿ……!

ವಿದ್ಯಾರ್ಥಿಯೊಬ್ಬ ಶಿಕ್ಷಕರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ.

ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 12ನೇ ತರಗತಿಯ ಮೂವರು ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ತರಗತಿಯಲ್ಲಿ ಶಿಕ್ಷಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಬೂರು ಸಮೀಪದ ಮದನೂರಿನಲ್ಲಿರುವ ಶಾಲೆಯ ಸಸ್ಯಶಾಸ್ತ್ರ ವಿಭಾಗದ ಶಿಕ್ಷಕರೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ಓರ್ವ ವಿದ್ಯಾರ್ಥಿ ಮಲಗಿದ್ದನ್ನು ಗಮನಿಸಿದ್ದಾರೆ. ಮಲಗಿದ್ದ ವಿದ್ಯಾರ್ಥಿಯನ್ನು ಎಬ್ಬಿಸಿ, ಅಸೈನ್ ಮೆಂಟ್ ಸಲ್ಲಿಸಿದ್ದೀರಾ ಎಂದು ಕೇಳಿದಾಗ, ವಿದ್ಯಾರ್ಥಿ ಶಿಕ್ಷಕರನ್ನು ನಿಂದಿಸಲು ಪ್ರಾರಂಭಿಸಿದ್ದಾನೆ. ಹಾಗೂ ಶಿಕ್ಷಕರಿಗೆ ಹೊಡೆಯಲು ಪ್ರಯತ್ನಿಸಿದ್ದಾನೆ.

ತರಗತಿಯಲ್ಲಿನ ಮತ್ತೊಬ್ಬ ವಿದ್ಯಾರ್ಥಿ ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಕೂಡಲೇ ವೈರಲ್ ಆಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ತನಿಖೆಗೆ ಆದೇಶಿದ್ದಾರೆ.

ಒಬ್ಬ ವಿದ್ಯಾರ್ಥಿ ಮಾತ್ರ ಶಿಕ್ಷಕರನ್ನು ನಿಂದಿಸಿ ಬೆದರಿಕೆ ಹಾಕಿದ್ದಾನೆ. ಅವರಲ್ಲಿ ಒಬ್ಬರು ತರಗತಿಗೆ ಮೊಬೈಲ್ ಫೋನ್ ತಂದಿದ್ದಕ್ಕೆ ಮತ್ತು ಇನ್ನೊಬ್ಬ ಶಿಕ್ಷಕರನ್ನು ನಿಂದಿಸಲು ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿದ ಕಾರಣಕ್ಕೆ, ಇತರ ಇಬ್ಬರು ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ.

ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಯಾವುದೇ ವಿದ್ಯಾರ್ಥಿಯನ್ನು ಅಮಾನತುಗೊಳಿಸಿಲ್ಲ. ವಿದ್ಯಾರ್ಥಿಯ ಪೋಷಕರಿಗೆ ಪಾಲಕ-ಶಿಕ್ಷಕರ ಸಂಘದ ಮೂಲಕ ನೋಟಿಸ್ ನೀಡಿದ್ದೇವೆ. ವಿದ್ಯಾರ್ಥಿಯು ತನ್ನ ಕೃತ್ಯಗಳಿಗೆ ವಿವರಣೆಯನ್ನು ನೀಡಿದರೆ ಅಥವಾ ಶಿಕ್ಷಕರಿಗೆ ಬೇಷರತ್ ಆಗಿ ಲಿಖಿತವಾಗಿ ಕ್ಷಮೆ ಯಾಚಿಸಿದರೆ ಅವನನ್ನು ಶಾಲೆಗೆ ಹಾಜರಾಗಲು ಅನುಮತಿಸಬಹುದು. ಆದರೆ, ಆತ ಕ್ಷಮೆ ಯಾಚಿಸದಿದ್ದರೆ, ಶಾಲೆಯ ಆಡಳಿತವು ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...