alex Certify ಶಾರುಖ್ ಕೈ ಹಿಡಿದೆಳೆದ ಅಭಿಮಾನಿ; ಅಪ್ಪನ ನೆರವಿಗೆ ಬಂದ ಆರ್ಯನ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್ ಕೈ ಹಿಡಿದೆಳೆದ ಅಭಿಮಾನಿ; ಅಪ್ಪನ ನೆರವಿಗೆ ಬಂದ ಆರ್ಯನ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಶಾರುಖ್ ಖಾನ್ ತಮ್ಮ ಪುತ್ರರಾದ ಆರ್ಯನ್ ಖಾನ್, ಅಬ್ರಾಹಂ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಅಭಿಮಾನಿಯೊಬ್ಬ ಶಾರುಖ್ ಕೈಹಿಡಿದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.

ಇತ್ತೀಚೆಗೆ ಈ ಘಟನೆ ನಡೆದಿದ್ದು, ಶಾರುಖ್ ಪುತ್ರರ ಜೊತೆ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಕೂಡ ಇದ್ದರು. ಈ ವೇಳೆ ಏಕಾಏಕಿ ಬಂದ ಈ ಅಭಿಮಾನಿ ಅನುಚಿತ ವರ್ತನೆ ತೋರಿ ಕೈ ಹಿಡಿದು ಶಾರುಖ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ.

ಇದರಿಂದ ಒಂದು ಕ್ಷಣ ಅವಾಕ್ಕಾದ ಶಾರುಖ್ ಹೆಜ್ಜೆ ಹಿಂದಿಟ್ಟಿದ್ದಾರೆ. ಇದನ್ನು ಗಮನಿಸಿದ ಪುತ್ರ ಆರ್ಯನ್ ತಕ್ಷಣ ಅಪ್ಪನ ಪಕ್ಕ ಬಂದು ನಿಂತಿದ್ದಾನೆ. ಜೊತೆಗೆ ಸೆಕ್ಯೂರಿಟಿಯವರು ಸಹ ಸುತ್ತುವರೆದಿದ್ದಾರೆ.

ಫೋಟೋಗಾಗಿ ಪಾಪರಾಜಿಗಳು ಕೂಗುತ್ತಿದ್ದರೂ ಸಹ ಶಾರುಖ್ ಖಾನ್ ಮತ್ತು ಅವರ ಪುತ್ರರು ಇದನ್ನು ಲೆಕ್ಕಿಸದೆ ಎರಡು ಕಾರುಗಳಲ್ಲಿ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...