alex Certify ಶಾಂತವಾದ ನಿದ್ರೆಗೆ ಮಲಗುವ ಮುನ್ನ ಸೇವಿಸಿ ಈ ಪದಾರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಂತವಾದ ನಿದ್ರೆಗೆ ಮಲಗುವ ಮುನ್ನ ಸೇವಿಸಿ ಈ ಪದಾರ್ಥ

 

ರಾತ್ರಿ ಮಲಗುವ ಮುನ್ನ ನಾವು ಸೇವಿಸುವ ಆಹಾರ ನಮ್ಮ ನಿದ್ರೆ ಸೇರಿದಂತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಕೆಲವೊಂದು ಪದಾರ್ಥ ಸೇವನೆ ಮಾಡುವುದ್ರಿಂದ ದುಪ್ಪಟ್ಟು ಲಾಭವಿದೆ. ಶಾಂತವಾದ ಒಳ್ಳೆಯ ನಿದ್ರೆ ಬರುವ ಜೊತೆಗೆ ಒತ್ತಡ ಕಡಿಮೆಯಾಗಿ ರಿಫ್ರೆಶ್ಮೆಂಟ್ ಸಿಗುತ್ತದೆ.

ಅನೇಕ ಜನರು ಗಾಢ ನಿದ್ರೆಗಾಗಿ, ನಿದ್ರೆ ಮಾತ್ರೆ ಸೇವನೆ ಮಾಡ್ತಾರೆ. ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಆದ್ದರಿಂದ ನಿದ್ರಾಹೀನತೆಯನ್ನು ಹೋಗಲಾಡಿಸಲು ಮಲಗುವ 2 ಗಂಟೆಗಳ ಮೊದಲು, ಪ್ರತಿದಿನ 3-4 ಬಾದಾಮಿಯನ್ನು ತಿನ್ನಲು ಪ್ರಾರಂಭಿಸಿ. ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ದೇಹದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ಮಲಗುವ ಮುನ್ನ ಗಸಗಸೆ ಹಾಲನ್ನು ಕುಡಿಯಿರಿ.

ಪ್ರತಿನಿತ್ಯ ಮಲಗುವ ಅರ್ಧ ಗಂಟೆ ಮೊದಲು ಈ ಹಾಲನ್ನು ಸೇವಿಸಿದರೆ ಆಯಾಸ ಮತ್ತು ಒತ್ತಡ  ದೂರವಾಗುತ್ತದೆ. ಮನಸ್ಸಿಗೆ ವಿಶ್ರಾಂತಿ ಸಿಗುತ್ತೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ-6 ಇದೆ. ಇದು ಮೆಲಟೋನಿನ್ ಹಾರ್ಮೋನ್ ಹೆಚ್ಚಿಸುತ್ತೆ. ಈ ಕಾರಣದಿಂದಾಗಿ ಹಾಸಿಗೆಯ ಮೇಲೆ ಮಲಗಿದ ನಂತರ ಮೆದುಳು ಮಲಗಲು ಸಂಕೇತಗಳನ್ನು ಪಡೆಯಲು ಪ್ರಾರಂಭಿಸುತ್ತದೆ. ಅದರ ಸಹಾಯದಿಂದ  ರಾತ್ರಿಯಿಡೀ ಆಳವಾದ ಮತ್ತು ಶಾಂತ ನಿದ್ರೆ ಬರುತ್ತದೆ. ಸಿಹಿ ಗೆಣಸು ನಿದ್ರೆಗೆ ತುಂಬಾ ಪ್ರಯೋಜನಕಾರಿ.

ಬಾಳೆಹಣ್ಣಿನಂತೆ ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಿ ನಿದ್ರಾಹೀನತೆಯನ್ನು ದೂರ ಮಾಡುತ್ತೆ. ಸಾಮಾನ್ಯವಾಗಿ ಜನರು ಬೆಳಗಿನ ಉಪಾಹಾರದ ಸಮಯದಲ್ಲಿ ಸಿರಿಧಾನ್ಯಗಳನ್ನು ತಿನ್ನುತ್ತಾರೆ. ಆದರೆ ಇದನ್ನು ರಾತ್ರಿಯಲ್ಲಿ ಉಗುರುಬೆಚ್ಚಗಿನ ಹಾಲಿನೊಂದಿಗೆ ಸೇವಿಸಬೇಕು. ಇದರಲ್ಲಿ ಕಾರ್ಬೋಹೈಡ್ರೇಡ್​ ಅಂಶ ಇರುತ್ತೆ. ಇದು ರಕ್ತದ ಹರಿವನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಟ್ರಿಪ್ಟೊಫಾನ್ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಆಳವಾದ ಮತ್ತು ಶಾಂತ ನಿದ್ರೆಗೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...