alex Certify ಶಬರಿಮಲೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವನ್ನಾಗಿ ಮಾಡಲು ‘ಮಿಷನ್ ಗ್ರೀನ್ ಶಬರಿಮಲೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವನ್ನಾಗಿ ಮಾಡಲು ‘ಮಿಷನ್ ಗ್ರೀನ್ ಶಬರಿಮಲೆ’

ಶಬರಿಮಲೆ ತೀರ್ಥಯಾತ್ರೆಗೆ ಹೊಂದಿಕೊಂಡು ಶಬರಿಮಲೆ ಪರಿಸರ ಪ್ರದೇಶವನ್ನೂ ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂಬ ಗುರಿಯೊಂದಿಗೆ ‘ಮಿಷನ್ ಗ್ರೀನ್ ಶಬರಿಮಲೆ’ ಎಂಬ ಯೋಜನೆ ರೂಪುಗೊಂಡಿದೆ.

ಪಟ್ಟಣಂ ತಿಟ್ಟ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೆ ತರುವ ಮಿಷನ್ ಗ್ರೀನ್ ಶಬರಿಮಲೆಗಾಗಿ ಬಗೆಬಗೆಯ ಪ್ರಚಾರ ಅಭಿಯಾನಗಳನ್ನು ಶುಚಿತ್ವ ಮಿಷನ್ ಕೈಗೊಳ್ಳುತ್ತದೆ. ಶಬರಿಮಲೆಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವುದಕ್ಕೆ ಶುಚಿತ್ವ ಮಿಷನ್ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ದೇವಸ್ವಂ ಮಂಡಳಿ, ಅರಣ್ಯ ಇಲಾಖೆ, ಕುಟುಂಬ ಶ್ರೀ ಮಿಷನ್, ಪೊಲೀಸ್, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ ಎಂಬ ವಿಭಾಗಗಳ ಸಹಕಾರದೊಂದಿಗೆ ಮಿಷನ್ ಗ್ರೀನ್ ಶಬರಿಮಲೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಶಬರಿಮಲೆಯನ್ನೂ ಪರಿಸರ ಪ್ರದೇಶಗಳನ್ನೂ ಪ್ಲಾಸ್ಟಿಕ್ ಮುಕ್ತಗೊಳಿಸುವುದಕ್ಕಾಗಿ ನಡೆಸುವ ಪ್ರಚಾರದ ಅಂಗವಾಗಿ, ತೀರ್ಥ ಯಾತ್ರಿಕರಿಗೆ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪ್ಲಾಸ್ಟಿಕ್ ತ್ಯಾಜ್ಯಗಳ ಕುರಿತು ಅರಿವು ಮೂಡಿಸುವ ಸಂದೇಶಗಳನ್ನು ಹೊಂದಿರುವ 50 ಸಾವಿರದಷ್ಟು ಬಟ್ಟೆಯ ಚೀಲಗಳನ್ನು ವಿತರಿಸಲಾಗುತ್ತದೆ.

ನಿಲಯ್ಕಲ್ ಬಸ್ ಕ್ಯಾಂಪಿನಲ್ಲೂ ಚೆಂಗನ್ನೂರು ರೈಲ್ವೇ ಸ್ಟೇಶನ್ನಲ್ಲೂ ಸ್ಟಾಲ್ಗಳ ಮೂಲಕ ಯಾತ್ರಿಕರಿಗೆ ಬಟ್ಟೆಯ ಚೀಲಗಳನ್ನು ವಿತರಿಸುತ್ತಾರೆ. ಪಂಪಾನದಿಯ ನೀರಿನಲ್ಲಿ ಯಾತ್ರಿಕರು ತಮ್ಮ ಬಟ್ಟೆಗಳನ್ನು ಹರಿಯಬಿಡುವುದನ್ನು ತಡೆಯುವುದಕ್ಕಾಗಿ ಪಂಪಾ ನದಿಯ ಸ್ನಾನಘಟ್ಟಗಳಲ್ಲಿ ಗ್ರೀನ್ ಗಾರ್ಡ್ಸ್ ಕಾರ್ಯಕರ್ತರು ದಿನದ 24 ಗಂಟೆಗಳೂ ಶಿಫ್ಟ್ ವ್ಯವಸ್ಥೆಯಲ್ಲಿ ಕಾರ್ಯನಿರತರಾಗಿರುತ್ತಾರೆ.

ಶಬರಿಮಲೆ ನೈರ್ಮಲ್ಯ ಸೊಸೈಟಿಯ ಅಧೀನದಲ್ಲಿರುವ ಸದಸ್ಯರು ಗ್ರೀನ್ ಗಾರ್ಡ್ಸ್ ಆಗಿ ಕಾರ್ಯವೆಸಗುತ್ತಾರೆ. ಜಿಲ್ಲೆಯ ವಿವಿಧ ಕಾಲೇಜುಗಳ ಎನ್.ಎಸ್.ಎಸ್. ಸ್ವಯಂಸೇವಕರು ಮಿಷನ್ ಗ್ರೀನ್ ಶಬರಿಮಲೆ ಯೋಜನೆಯಲ್ಲಿ ಪಾಲುಗೊಳ್ಳುತ್ತಾರೆ.

ನಿಲಯ್ಕಲ್, ಪಂಬಗಳಲ್ಲಿರುವ ಸಾವಯವೇತರ ತ್ಯಾಜ್ಯಗಳನ್ನು ಶುಚಿತ್ವ ಮಿಷನ್ನ ನೇತೃತ್ವದಲ್ಲಿ ಸಂಗ್ರಹಿಸುತ್ತಾರೆ. ಹಾಗೆ ಶೇಖರಿಸಿದ ತ್ಯಾಜ್ಯಗಳನ್ನು ತಿರುವಲ್ಲ ಕೇಂದ್ರವಾಗಿರುವ ಖಾಸಗಿ ಸಂಸ್ಥೆಯೊಂದು ಸಂಸ್ಕರಿಸುತ್ತದೆ.

ನಿಲಯ್ಕಲ್, ಪಂಬಗಳಲ್ಲಿ ಆರು ದೊಡ್ಡ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪೆಟ್ಟಿಗೆಗಳನ್ನು ಸ್ಥಾಪಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೀಲಗಳನ್ನು ಹಾಕಿಡುವುದಕ್ಕಾಗಿ ಈ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಪಂಬ, ನಿಲಯ್ಕಲ್, ಪಂದಳಂ ನಲ್ಲಿ ನೂರಕ್ಕೂ ಹೆಚ್ಚು ಉಕ್ಕಿನ ಪೆಟ್ಟಿಗೆಗಳನ್ನು(Steel Bin) ಸಾವಯವೇತರ ತ್ಯಾಜ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಇಡಲಾಗಿದೆ.

ಪಂಪಾ ನದಿಯಲ್ಲಿ ಬಟ್ಟೆಗಳನ್ನು ಎಸೆಯುವುದು ಶಬರಿಮಲೆಯ ವ್ರತಾಚರಣೆಗೆ ವಿರುದ್ಧವಾದುದೆಂದೂ ಶಬರಿಮಲೆಯನ್ನೂ ಕಾಡು ದಾರಿಯನ್ನೂ ಪ್ಲಾಸ್ಟಿಕ್ ಮುಕ್ತವನ್ನಾಗಿ ಸಂರಕ್ಷಿಸಬೇಕೆಂದೂ ವಿವಿಧ ಭಾಷೆಗಳಲ್ಲಿ ಬರೆದ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಶಬರಿಮಲೆಯ ವಿಶೇಷ ದಿನಗಳನ್ನು ಗುರುತಿಸಿದ ‘ಪೋಕೆಟ್ ಕಾರ್ಡು’ಗಳನ್ನು ಜಿಲ್ಲೆಯಾದ್ಯಂತ ವಿವಿಧ ಕೇಂದ್ರಗಳಲ್ಲಿ ತೀರ್ಥಯಾತ್ರಿಕರಿಗೆ ವಿತರಿಸಲಾಗುತ್ತದೆ.

ರೈಲ್ವೆ ಮೂಲಕ ತೀರ್ಥಯಾತ್ರೆಗೆ ಬರುವ ಭಕ್ತರ ಗಮನಕ್ಕೆ ತರುವ ಸಲುವಾಗಿ ಚೆಂಗನ್ನೂರು ರೈಲ್ವೆ ಸ್ಟೇಶನ್ನಲ್ಲಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ, ಯಾವುದೇ ರೈಲ್ವೇ ಘೋಷಣೆಗೆ ಮೊದಲು ಈ ಜಾಗೃತಿಯ ಸಂದೇಶಗಳನ್ನು ಸಾರಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...