alex Certify ವ್ಯಾಯಾಮ ಮಾಡಬೇಡ ಎಂದಿದ್ದಕ್ಕೆ ಡಂಬೆಲ್ಸ್​ ಎಸೆದು ತಾಯಿಯನ್ನೇ ಕೊಂದ ಪಾಪಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಯಾಮ ಮಾಡಬೇಡ ಎಂದಿದ್ದಕ್ಕೆ ಡಂಬೆಲ್ಸ್​ ಎಸೆದು ತಾಯಿಯನ್ನೇ ಕೊಂದ ಪಾಪಿ..!

ಮಾನಸಿಕ ಅಸ್ವಸ್ಥನಾಗಿದ್ದ ಪುತ್ರ ತನ್ನ ತಾಯಿ ಹಾಗೂ ಸಹೋದರಿಯ ಮೇಲೆ ಡಂಬೆಲ್​​ನಿಂದ ಹಲ್ಲೆ ನಡೆಸಿದ್ದಾನೆ. ತೆಲಂಗಾಣದ ಹೈದರಾಬಾದ್​​ ಸುಲ್ತಾನ್​ ಬಜಾರ್​ನಲ್ಲಿ ಈ ಶಾಕಿಂಗ್​ ಘಟನೆಯು ವರದಿಯಾಗಿದೆ.

24 ವರ್ಷದ ಸುಧೀರ್​ ಕುಮಾರ್​ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೇಹದಂಡನೆ ಮಾಡುತ್ತಿದ್ದ ಎನ್ನಲಾಗಿದೆ .ಇದನ್ನು ಗಮನಿಸಿದ ತಾಯಿ ಕೊಂಡ ಪಾಪಮ್ಮ ವ್ಯಾಯಾಮ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಇಷ್ಟಕ್ಕೆ ತಾಯಿ ಮೇಲೆ ಕೋಪಗೊಂಡ ಪುತ್ರ ತಾಯಿಯ ಮೇಲೆ ಡಂಬೆಲ್​ನಿಂದ ದಾಳಿ ನಡೆಸಿದ್ದಾನೆ. ಇದನ್ನು ತಪ್ಪಿಸಲು ಬಂದ ಸಹೋದರಿ ಸುಚಿತ್ರಾ ಮೇಲೂ ಈತ ಹಲ್ಲೆ ನಡೆಸಿದ್ದಾನೆ.

ಪುತ್ರ ನಡೆಸಿದ ದಾಳಿಯಲ್ಲಿ ತಾಯಿ ಕೊಂಡ ಪಾಪಮ್ಮ ಸಾವನ್ನಪ್ಪಿದ್ದಾರೆ. ಸಹೋದರಿ ಸುಚಿತ್ರಾಗೂ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸುಧೀರ್​ನನ್ನು ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪದವಿ ಪೂರೈಸಿದ್ದ ಸುಧೀರ್​ ಫುಡ್​ ಡೆಲಿವರಿ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ವರ್ಷ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಈತ ಮನೆಯಲ್ಲಿಯೇ ವಾಸವಿದ್ದ ಎನ್ನಲಾಗಿದೆ.

ತನಿಖೆಯ ವೇಳೆಯಲ್ಲಿ ಪೊಲೀಸರಿಗೆ ಸುಧೀರ್​ ಒಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಅಲ್ಲದೇ ಈತ ಕೆಲ ಸಮಯದ ಹಿಂದಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಆರಂಭಿಸಿದ್ದ ಎನ್ನಲಾಗಿದೆ. ಈತನ ತಂದೆ ಮೃತಪಟ್ಟಿದ್ದು ಕಳೆದ 7 ವರ್ಷಗಳಿಂದ ತಾಯಿ ಹಾಗೂ ಸಹೋದರಿಯ ಜೊತೆಯಲ್ಲಿ ವಾಸವಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...