alex Certify ವ್ಯಕ್ತಿ ಮೇಲೆ ನಟ ಜೈಜಗದೀಶ್ ಹಲ್ಲೆ; ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿ ಮೇಲೆ ನಟ ಜೈಜಗದೀಶ್ ಹಲ್ಲೆ; ದೂರು ದಾಖಲು

Bigg Boss Kannada is a place for reformation: Jai Jagdish - Times of Indiaವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ಜೈಜಗದೀಶ್ ಮತ್ತಿತರರ ವಿರುದ್ಧ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 5ರಂದು ಈ ಘಟನೆ ನಡೆದಿದ್ದು, ಜಯರಾಮೇಗೌಡ ಎಂಬವರು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ನಿರ್ವಾಹಕನಿಗೆ ಹೇಳಿ ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ.

ಇದೇ ಸಂದರ್ಭದಲ್ಲಿ ಹಿಂದಿನಿಂದ ಕಾರಿನಲ್ಲಿ ಬಂದ ಜೈಜಗದೀಶ್ ಮತ್ತಿತರರು, ಯಾಕೋ ಬಸ್ಸಿನಿಂದ ಬಾಟಲಿ ಎಸೆಯುತ್ತೀಯಾ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಈಗ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...