alex Certify ವೈವಾಹಿಕ ಸಂಬಂಧದ ಕುರಿತು ಗುಜರಾತ್​ ಹೈಕೋರ್ಟ್​ ನಿಂದ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈವಾಹಿಕ ಸಂಬಂಧದ ಕುರಿತು ಗುಜರಾತ್​ ಹೈಕೋರ್ಟ್​ ನಿಂದ ಮಹತ್ವದ ಆದೇಶ

ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ಮೂಲಕ ಗುಜರಾತ್​ ಹೈಕೋರ್ಟ್​ ಮಹತ್ವದ ಆದೇಶವೊಂದನ್ನು ಪ್ರಕಟಿಸಿದೆ. ಪುರುಷನು ತನ್ನ ಪತ್ನಿಯ ಜೊತೆ ಸಹಬಾಳ್ವೆ ಮಾಡಲು ಹಾಗೂ ವೈವಾಹಿಕ ಹಕ್ಕುಗಳನ್ನು ಸ್ಥಾಪಿಸಲು ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ ಎಂದು ಕೋರ್ಟ್​ ಹೇಳಿದೆ. ಪತ್ನಿಯು ವೈವಾಹಿಕ ಜೀವನವನ್ನು ಇಷ್ಟಪಡದೇ ಹೋದಲ್ಲಿ ಆಕೆಗೆ ಬಲವಂತ ಮಾಡುವ ಅಧಿಕಾರ ಪುರುಷನಿಗೆ ಇರೋದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಬನಸ್ಕಾಂತದ ದಂಪತಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಗುಜರಾತ್​ ಹೈಕೋರ್ಟ್ ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಈ ದಂಪತಿಯು 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದಾಂಪತ್ಯದ ಫಲವಾಗಿ ಇವರಿಗೆ ಓರ್ವ ಪುತ್ರ ಕೂಡ ಇದ್ದಾನೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಪತ್ನಿಯು ಪತಿಯ ಮನೆಯನ್ನು ತೊರೆದು ತವರು ಮನೆಯಲ್ಲಿ ವಾಸವಿದ್ದಳು ಎನ್ನಲಾಗಿದೆ.

ನನಗೆ ಪತಿ ಮನೆಯವರು ಕಿರುಕುಳ ನೀಡಿದ್ದಾರೆ. ನನಗೆ ಆಸ್ಟ್ರೇಲಿಯಾಗೆ ತೆರಳುವಂತೆ ಹಾಗೂ ಬಳಿಕ ಪತಿಯನ್ನೂ ಅಲ್ಲಿಗೆ ಕರೆಯಿಸಿಕೊಳ್ಳುವಂತೆ ಗಂಡನ ಮನೆಯಲ್ಲಿ ಒತ್ತಡ ಹೇರಲಾಗುತ್ತಿತ್ತು ಎಂಬುದು ಪತ್ನಿಯ ಆರೋಪವಾಗಿದೆ.

ಈ ಗಲಾಟೆಯು ಮಿತಿಮೀರಿದ ಬಳಿಕ ಮಹಿಳೆಯ ಪತಿ ಪಾಲನ್​ಪುರದಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಾಗೂ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಮುಂದಾಗಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ ಕೌಟುಂಬಿಕ ನ್ಯಾಯಾಲಯ ಪತಿಯೊಂದಿಗೆ ವಾಸಿಸುವಂತೆ ಮಹಿಳೆಗೆ ಸೂಚನೆ ನೀಡಿತ್ತು.

ಆದರೆ ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಮಹಿಳೆಯು ಗುಜರಾತ್​ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿ ಅರ್ಜಿ ವಿಚಾರಣೆ ನಡೆಸಿದ ಜೆಬಿ ಪರ್ದಿವಾಲಾ ಹಾಗೂ ನಿರಾಲ್ ಮೆಹ್ತಾ ಅವರಿದ್ದ ನ್ಯಾಯಪೀಠವು, ವಿವಾಹವು ಒಂದು ನಾಗರಿಕ ಒಪ್ಪಂದವಾಗಿದೆ. ವೈವಾಹಿಕ ಹಕ್ಕನ್ನು ಮರುಸ್ಥಾಪಿಸುವುದು ಮೂಲಭೂತ ಹಕ್ಕಿನ ವಿರುದ್ಧವಾಗಿದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...