alex Certify ವೈದ್ಯರು ಮೊದಲು ರೋಗಿಯ ನಾಲಿಗೆ ಪರೀಕ್ಷಿಸುವುದೇಕೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯರು ಮೊದಲು ರೋಗಿಯ ನಾಲಿಗೆ ಪರೀಕ್ಷಿಸುವುದೇಕೆ…..?

ನಮ್ಮ ದೇಹದಲ್ಲಿನ ರೋಗದ ಆರಂಭಿಕ ಲಕ್ಷಣಗಳು ಅನೇಕ ಅಂಗಗಳಲ್ಲಿ ಗೋಚರಿಸುತ್ತವೆ. ಅನಾರೋಗ್ಯಕ್ಕೆ ತುತ್ತಾಗಿ ವೈದ್ಯರ ಬಳಿ ಹೋದಾಗ ಅವರು ಮೊದಲು ನಮ್ಮ ನಾಲಿಗೆಯನ್ನು ಪರೀಕ್ಷಿಸುತ್ತಾರೆ. ವೈದ್ಯರು ನಾಲಿಗೆಯನ್ನು ಏಕೆ ನೋಡುತ್ತಾರೆ? ವೈದ್ಯರು ನಾಲಿಗೆಯ ಮೂಲಕ ಕಾಯಿಲೆಯನ್ನು ಹೇಗೆ ಪತ್ತೆ ಮಾಡುತ್ತಾರೆ ಅನ್ನೋದು ಇಂಟ್ರೆಸ್ಟಿಂಗ್‌ ಸಂಗತಿ. ನಾಲಿಗೆಯಲ್ಲಿ ಕಂಡುಬರುವ ಬದಲಾವಣೆಗಳು ಕೆಲವೊಂದು ರೋಗದ ಲಕ್ಷಣಗಳಾಗಿರುತ್ತವೆ.

ನಾಲಿಗೆಯಿಂದ ರೋಗವನ್ನು ಗುರುತಿಸುವುದು ಹೇಗೆ?

ನಾಲಿಗೆ ಬಿಳಿಯಾಗುವುದುನಾಲಿಗೆಯ ಬಣ್ಣವು ಬಿಳಿಯಾಗಿದ್ದರೆ ಅಥವಾ ಅದರ ಮೇಲೆ ಬಿಳಿ ಕಲೆಗಳು ಕಂಡುಬಂದರೆ ಯೀಸ್ಟ್ ಸೋಂಕಿನ ಚಿಹ್ನೆಗಳಾಗಿರಬಹುದು ಎಂದು ಅರ್ಥಮಾಡಿಕೊಳ್ಳಬೇಕು. ತಂಬಾಕು ಸೇವಿಸುವವರ ನಾಲಿಗೆ ಹೆಚ್ಚಾಗಿ ಬೆಳ್ಳಗಾಗುತ್ತದೆ. ತಿಳಿ ಬಿಳಿ ನಾಲಿಗೆ ರಕ್ತಹೀನತೆಯ ಲಕ್ಷಣವಾಗಿರಬಹುದು.

ನಾಲಿಗೆಯ ಮೇಲೆ ಕಪ್ಪು ಕಲೆಗಳುನಾಲಿಗೆಯ ಮೇಲೆ ಕಪ್ಪು ಚುಕ್ಕೆ ಇದ್ದರೆ, ಅದು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿನ ಲಕ್ಷಣ. ಐರನ್‌ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೂ ನಾಲಿಗೆಯ ಬಣ್ಣ ಕಪ್ಪಾಗುತ್ತದೆ. ಅದರ ಸಂಕೇತಗಳು ನಾಲಿಗೆಯ ಮೂಲಕ ಕಂಡುಬರುತ್ತವೆ.

ನಾಲಿಗೆಯ ಕೆಂಪುನಾಲಿಗೆಯ ಕೆಂಪು ಬಣ್ಣವು ದೇಹದಲ್ಲಿ ವಿಟಮಿನ್ ಬಿ 12 ಕೊರತೆಯ ಸಂಕೇತವಾಗಿದೆ. ಕೆಲವೊಮ್ಮೆ ನಾಲಿಗೆಯ ಕೆಂಪು ಬಣ್ಣವು ಸೋಂಕು ಮತ್ತು ಜ್ವರದ ಲಕ್ಷಣವಾಗಿರಬಹುದು. ಇದು ಸಂಭವಿಸಿದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು

.ಕೂದಲು ಅಂಟಿಕೊಂಡಂತೆ ಗೋಚರ – ಕೆಲವೊಮ್ಮೆ ನಾಲಿಗೆಯ ಮೇಲೆ ಕೂದಲಿನಂತೆ ಏನಾದರೂ ಅಂಟಿಕೊಂಡಿದೆ ಎಂದು ತೋರುತ್ತದೆ. ಇದು ಬಿಳಿ, ಕಪ್ಪು ಅಥವಾ ಕಂದು ಬಣ್ಣದ್ದಾಗಿರಬಹುದು. ಇದು ಪ್ರೋಟೀನ್ ಸಮಸ್ಯೆಯಿಂದ ಸಂಭವಿಸುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾಗಳು ಸಿಲುಕಿ ಆರೋಗ್ಯಕ್ಕೆ ಹಾನಿಯಾಗುವ ಅಪಾಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...