alex Certify ವೇಗವಾಗಿ ಹೋಗುತ್ತಿದ್ದ ಬಸ್ ಹಿಡಿದು ಸ್ಕೇಟಿಂಗ್​; ವಿದೇಶಿಗನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಗವಾಗಿ ಹೋಗುತ್ತಿದ್ದ ಬಸ್ ಹಿಡಿದು ಸ್ಕೇಟಿಂಗ್​; ವಿದೇಶಿಗನ ವಿಡಿಯೋ ವೈರಲ್

​ಸಾಮಾನ್ಯವಾಗಿ ಖಾಲಿ ರಸ್ತೆಯಲ್ಲಿ ಸ್ಕೇಟಿಂಗ್​ ಮಾಡಲಾಗುತ್ತದೆ. ಆದರೆ ಕೊಯಮತ್ತೂರಿನಲ್ಲಿ ವಿದೇಶಿಗನೊಬ್ಬ ಬಸ್​ ಹಿಡಿದುಕೊಂಡು ರಸ್ತೆಯಲ್ಲಿ ಸ್ಕೇಟಿಂಗ್​ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಹಜವಾಗಿ ಇದು ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ ಎಂದು ಹೇಳಬೇಕಾಗಿಲ್ಲ. ಪ್ರಮುಖ ಪ್ರವಾಸಿ ತಾಣಗಳನ್ನು ವಿಮಾನ ನಿಲ್ದಾಣದಿಂದ ಸಂಪರ್ಕಿಸುವ ಅವಿನಾಶಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿದೇಶಿ ಪ್ರಜೆಯು ಕ್ಯಾಬ್​ ಸವಾರಿಯನ್ನು ಬಿಟ್ಟು ತನ್ನ ಸ್ಕೇಟ್​ಬೋರ್ಡ್​ನಲ್ಲಿ ತಾನು ತಲುಪಬೇಕಾದ ಸ್ಥಳವನ್ನು ಮುಟ್ಟಲು ಈ ಆಯ್ಕೆ ಆರಿಸಿಕೊಂಡ. ದಾರಿಯಲ್ಲಿ ಬರುತ್ತಿದ್ದ ಬಸ್ಸಿನ ಹಿಂಬದಿಯ ಏಣಿಯನ್ನು ಹಿಡಿದು ನಿಂತಿದ್ದರಿಂದ ಅವನು ಅನಾಯಾಸವಾಗಿ ರಸ್ತೆಯ ಮೇಲೆ ಸ್ಕೇಟಿಂಗ್​ ಮಾಡಿದ್ದಾನೆ.

ಈ ರೀತಿಯ ಸಾರಿಗೆಯ ಆಯ್ಕೆಯು ಇಬ್ಬರು ಬೈಕರ್​ಗಳ ಗಮನ ಸೆಳೆಯಿತು. ಅವರು ಬಸ್​ ಹಿಡಿದುಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಸ್ಕೇಟರ್​ನ ಪ್ರಯತ್ನವನ್ನು ರೆಕಾರ್ಡ್​ ಮಾಡಿದರು. ಅಲ್ಲದೇ ಅವರಿಬ್ಬರ ಚರ್ಚೆ ಕೂಡ ರೆಕಾರ್ಡ್​ ಆಗಿದೆ. ಸ್ಕೇಟರ್​ ಬಗ್ಗೆ ಕಾಳಜಿ ತೋರುವುದೂ ಗೊತ್ತಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...