alex Certify ವಿಶಿಷ್ಟ ಯೋಜನೆ ಜಾರಿ: ಅಪಘಾತಕ್ಕೀಡಾದವರನ್ನು ರಕ್ಷಿಸಿದರೆ ಸಿಗುತ್ತೆ ನಗದು ಬಹುಮಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ಯೋಜನೆ ಜಾರಿ: ಅಪಘಾತಕ್ಕೀಡಾದವರನ್ನು ರಕ್ಷಿಸಿದರೆ ಸಿಗುತ್ತೆ ನಗದು ಬಹುಮಾನ..!

ತಮಿಳುನಾಡು ಸರ್ಕಾರವು ಅತ್ಯಂತ ವಿಶಿಷ್ಟವಾದ ಯೋಜನೆಯನ್ನು ಜಾರಿಗೆ ತಂದಿದ್ದು, ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಆರೈಕೆ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುವವರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಘೋಷಿಸಿದೆ.

ಸ್ಟಾಲಿನ್​ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ, ರಸ್ತೆ ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡುವವರಿಗೆ ಹಾಗೂ ಅವರನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡುವವರಿಗೆ ಸರ್ಕಾರವು ಪ್ರಶಂಸಾ ಪತ್ರ ಹಾಗೂ 5000 ರೂಪಾಯಿಗಳ ನಗದು ಬಹುಮಾನವನ್ನು ನೀಡಲಿದೆ ಎಂದು ಬರೆದಿದ್ದಾರೆ.

ಗಾಯಾಳುಗಳಿಗೆ ಮೊದಲ 48 ಗಂಟೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ‘ಇನ್ನುಯಿರ್ ಕಪ್ಪೊನ್’ ಯೋಜನೆಗೆ ಈ ಹಿಂದೆ ಸಿಎಂ ಚಾಲನೆ ನೀಡಿದ್ದರು. ರಾಜ್ಯದಾದ್ಯಂತ 609 ಆಸ್ಪತ್ರೆಗಳು 408 ಖಾಸಗಿ ಆಸ್ಪತ್ರೆಗಳು ಮತ್ತು 201 ಸರ್ಕಾರಿ ಆಸ್ಪತ್ರೆಗಳು ಗೋಲ್ಡನ್ ಅವರ್‌ನಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸಲು ಮತ್ತು ಜೀವಗಳನ್ನು ಉಳಿಸಲು ನೆಟ್​​ವರ್ಕ್​ಗಳನ್ನು ಹೊಂದಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...