alex Certify ವಿವಾಹ ನಡೆಯುವಾಗಲೇ ಕಿಸ್‌ ಮಾಡಿದ ವಧು-ವರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ನಡೆಯುವಾಗಲೇ ಕಿಸ್‌ ಮಾಡಿದ ವಧು-ವರ…..!

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ, ತಮಾಷೆಯಂತಹ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಆಧುನಿಕ ಹಿಂದೂ ವಿವಾಹದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇಲ್ಲಿ ವಧು-ವರರು ಪರಸ್ಪರ ಚುಂಬಿಸಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ. ದೇಸಿ ವಧು-ವರರು ಮಂಟಪದ ಮೇಲೆ ಕುಳಿತು ಶಾಸ್ತ್ರಗಳನ್ನು ಪೂರೈಸುತ್ತಿದ್ದಾರೆ. ಈ ವೇಳೆ ವರನ ತಂದೆ, ವಧು-ವರ ಪರಸ್ಪರ ಚುಂಬಿಸುವಂತೆ ಪಂಡಿತರಲ್ಲಿ ಹೇಳಲು ಹೇಳಿದ್ದಾರೆ. ಮಂತ್ರ ಹೇಳುತ್ತಿದ್ದ ಪಂಡಿತರು, ವಧು-ವರನನ್ನು ಪರಸ್ಪರ ಚುಂಬಿಸುವಂತೆ ಹೇಳಿದ್ದಾರೆ. ಅರ್ಚಕರ ಮಾತು ಕೇಳಿದ ವಧು-ವರ ಪರಸ್ಪರ ಚುಂಬಿಸಿದ್ದಾರೆ.

ವರನ ತಂದೆಯ ಮಾತು ಕೇಳಿ ಮೊದಲಿಗೆ ಅರ್ಚಕರು ನಾಚಿಕೆಯಿಂದ ನಕ್ಕರೂ, ನಂತರ ಪರಸ್ಪರ ಚುಂಬಿಸಿ ಎಂದು ವಧು-ವರನಿಗೆ ಹೇಳಿದ್ದಾರೆ. ಈ ವೇಳೆ ಅತಿಥಿಗಳು ದಂಪತಿಯನ್ನು ಹುರಿದುಂಬಿಸಿದ್ದಾರೆ. ಪರಸ್ಪರರ ತುಟಿಗಳ ಚುಂಬಿಸಿದ ಬಳಿಕ ವರ ಕೂಡ ಚಪ್ಪಾಳೆ ತಟ್ಟಿದ್ದಾನೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೂತನ ದಂಪತಿಯ ಈ ಸುಂದರ ಕ್ಷಣವು ನೆಟ್ಟಿಗರ ಹೃದಯಗೆದ್ದಿದೆ. ವಧು-ವರ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...