alex Certify ವಿವಾದ ಸೃಷ್ಟಿಸಿದ ಸನ್ನಿ ಲಿಯೋನಿ ಸಾಂಗ್, ಮಧುಬನ್ ಹಾಡಿಗೆ ಎಲ್ಲೆಡೆ ವಿರೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದ ಸೃಷ್ಟಿಸಿದ ಸನ್ನಿ ಲಿಯೋನಿ ಸಾಂಗ್, ಮಧುಬನ್ ಹಾಡಿಗೆ ಎಲ್ಲೆಡೆ ವಿರೋಧ

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಸೀಬ್ ಕೆಟ್ಟಿದೆ ಅಂದ್ರೆ ತಪ್ಪಾಗಲ್ಲ.‌ ಆದ್ರೂ ಬುದ್ಧಿ ಕಲಿಯದ ಬಿ ಟೌನ್ ಮಂದಿ ಸದಾ ವಿವಾದಾತ್ಮಕ ಸುದ್ದಿಯಿಂದಲೆ ಸದ್ದು ಮಾಡ್ತಿದ್ದಾರೆ. ಇದೀಗ ನೆನ್ನೆಯಷ್ಟೆ ರಿಲೀಸ್ ಆಗಿರೊ ಸನ್ನಿ ಲಿಯೋನಿಯ ಮಧುಬನ್ ಹಾಡಿಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಬಾಯ್ಕಟ್ ಮಧುಬನ್ ಅನ್ನೋದ್ರ ಜೊತೆಗೆ ಬಾಯ್ಕಟ್ ಬಾಲಿವುಡ್ ಟ್ರೆಂಡ್ ಮತ್ತೆ ಶುರುವಾಗಿದೆ.

ಸರಿಗಮ ಮ್ಯೂಸಿಕ್ ಬ್ಯಾನರ್ ನಲ್ಲಿ ರಿಲೀಸ್ ಆಗಿರೊ ಮಧುಬನ್ ಹಾಡಿನ ಲಿರಿಕ್ಸ್ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳನ್ನ ಕೆಣಕಿದೆ. ನಾಚೇ ಮಧುಬನ್ ಮೇ ರಾಧಿಕಾ ಎಂದು ಶುರುವಾಗೋ ಈ ಹಾಡಿಗೆ ಲಿರಿಕ್ಸ್ ಬದಲಿಸಿ ಇಲ್ಲವೆ ಹಾಡನ್ನ ಎಲ್ಲಾ ಪ್ಲಾಟ್ ಫಾರ್ಮ್ ನಿಂದ ಡಿಲೀಟ್ ಮಾಡಿ ಎಂದು ಲಕ್ಷಾಂತರ ಮಂದಿ ಒತ್ತಾಯಿಸಿದ್ದಾರೆ. ಒಂದೇ ದಿನಕ್ಕೆ 2.1 ಮಿಲಿಯನ್ಸ್ ವ್ಯೂವ್ಸ್ ಪಡೆದಿರುವ ಈ ವಿಡಿಯೋಗೆ ಹತ್ತು ಸಾವಿರ ಜನ ಕಮೆಂಟ್ಸ್ ಮಾಡಿದ್ದಾರೆ, ಅದರಲ್ಲಿ ಸಾವಿರಾರು ಕಮೆಂಟ್ಸ್ ಸರಿಗಮ ಬ್ಯಾನರ್ ಹಾಗೂ ಬಾಲಿವುಡ್ ನ ವಿರುದ್ಧವಾಗಿವೆ.

ಇತ್ತ ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡಿನ ಬಗ್ಗೆ ಚರ್ಚೆಯಾಗ್ತಿದ್ದು, ಲಿರಿಕ್ಸ್ ಬದಲಾಯಿಸಿ ಇಲ್ಲವೇ ಹಾಡನ್ನೇ ಡಿಲೀಟ್ ಮಾಡಿ ಎಂಬ ಒತ್ತಾಯ ಹೆಚ್ಚಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...