alex Certify ವಿಮಾನ ಪ್ರಯಾಣ ದರಕ್ಕಿಂತ ದುಬಾರಿ ಮುಂಬೈನಲ್ಲಿನ ಉಬರ್ ಪ್ರಯಾಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪ್ರಯಾಣ ದರಕ್ಕಿಂತ ದುಬಾರಿ ಮುಂಬೈನಲ್ಲಿನ ಉಬರ್ ಪ್ರಯಾಣ….!

ಮುಂಬೈನಲ್ಲಿ ಉಬರ್ ಕಾರಿನಲ್ಲಿ ಪ್ರಯಾಣಿಸುವುದು ವಿಮಾನಯಾನ ದರಕ್ಕಿಂತ ಹೆಚ್ಚು ! 50 ಕಿಲೋಮೀಟರ್ ದೂರದ ಪ್ರಯಾಣಕ್ಕೆ ನೀಡುವ ದರಕ್ಕಿಂತ ಕಡಿಮೆ ದರದಲ್ಲಿ ಮುಂಬೈನಿಂದ ಗೋವಾಗೆ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.

ಹೌದು. ಮುಂಬೈ ನಿವಾಸಿ ಶ್ರವಣ್ ಕುಮಾರ್ ಸುವರ್ಣ ಎಂಬುವರು ಇತ್ತೀಚೆಗೆ ಭಾರೀ ಮಳೆ ಬೀಳುತ್ತಿದ್ದ ವೇಳೆಯಲ್ಲಿ ಉಬರ್ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದ್ದಾರೆ. ಅವರಿದ್ದ ಸ್ಥಳದಿಂದ ಮನೆಯವರೆಗೆ ಸುಮಾರು 50 ಕಿಲೋಮೀಟರ್ ದೂರವಿತ್ತು. ಈ ಪ್ರಯಾಣಕ್ಕೆ 3,041 ರೂಪಾಯಿ ಆಗುತ್ತದೆ ಎಂದು ಉಬರ್ ಆ್ಯಪ್ ಸ್ಕ್ರೀನ್ ನಲ್ಲಿ ತೋರಿಸುತ್ತಿದ್ದಂತೆಯೇ ಶ್ರವಣಕುಮಾರ್ ಅರೆಕ್ಷಣ ಗರಬಡಿದವರಂತೆ ನಿಂತಿದ್ದಾರೆ.

ಈ ವಿಚಾರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, ನಾನು ಮನೆಗೆ ಹೋಗಲು ನೀಡುವ ಬಾಡಿಗೆ ಹಣಕ್ಕಿಂತ ಕಡಿಮೆ ದರದಲ್ಲಿ ವಿಮಾನದಲ್ಲಿ ಗೋವಾಗೆ ಹೋಗಬಹುದು ಎಂದಿದ್ದಾರೆ.

ಉಬರ್ ಆ್ಯಪ್ ನ ಸ್ಕ್ರೀನ್ ನಲ್ಲಿ ಮೂಡಿಬಂದ ದರಪಟ್ಟಿಯ ಬಗ್ಗೆ ಬರೆದಿರುವ ಅವರು, ಪ್ರೀಮಿಯಂ ಕಾರಿನಲ್ಲಾದರೆ 4,081 ರೂಪಾಯಿ ಮತ್ತು ಎಕ್ಸ್ ಎಲ್ ನಲ್ಲಿ ಪ್ರಯಾಣಿಸಿದರೆ 5,159 ರೂಪಾಯಿಗಳಾಗುತ್ತದೆ ಎಂದು ತೋರಿಸಿದ್ದಾರೆ.

50 ಕಿಲೋಮೀಟರ್ ದೂರದಲ್ಲಿರುವ ಮನೆ ತಲುಪಲು ನಾನು ಸಾಮಾನ್ಯವಾಗಿ 800 ರಿಂದ 1000 ರೂಪಾಯಿ ನೀಡುತ್ತೇನೆ. ಆದರೆ, ಇಂದು ನನಗೆ ಉಬರ್ ತೋರಿಸಿರುವ ದರ ಪಟ್ಟಿಯನ್ನು ನೋಡಿ ದಂಗುಬಡಿದಂತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...