alex Certify ವಿಮಾನ ನಿಲ್ದಾಣದಲ್ಲಿ ಬೆಂಗಾಲಿ ನಟಿಯೊಂದಿಗೆ ಗಗನಸಖಿಯರಿಂದ ಬೊಂಬಾಟ್ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಲ್ಲಿ ಬೆಂಗಾಲಿ ನಟಿಯೊಂದಿಗೆ ಗಗನಸಖಿಯರಿಂದ ಬೊಂಬಾಟ್ ಸ್ಟೆಪ್ಸ್

ಕೋಲ್ಕತ್ತಾ: ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿರುವ ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ಹೆಸರು ಬಹುಷಃ ನೀವು ಕೇಳಿರಬಹುದು. ಟ್ರೆಂಡಿಂಗ್ ಹಾಡುಗಳಿಗೆ ಅವರು ವಿಮಾನದಲ್ಲಿ ನೃತ್ಯ ಮಾಡಿರುವ ವಿಡಿಯೋಗಳು ಸಾಕಷ್ಟು ಸದ್ದು ಮಾಡಿದ್ದವು. ಕೆಲವೊಮ್ಮೆ, ಆಕೆಯ ಕೆಲವು ಕ್ಯಾಬಿನ್ ಸಿಬ್ಬಂದಿ ಡ್ಯಾನ್ಸ್ ರೀಲ್‌ಗಳಲ್ಲಿ ಅವರೊಂದಿಗೆ ಸೇರಿ ಸ್ಟೆಪ್ಸ್ ಹಾಕಿದ್ದರು. ಹೀಗೆ ಹಲವಾರು ಗಗನಸಖಿಯರು ಖಾಲಿ ವಿಮಾನಗಳಲ್ಲಿ ಡ್ಯಾನ್ಸ್ ಮಾಡಿದ್ದಕ್ಕಾಗಿ ವೈರಲ್ ಆಗಿದ್ದಾರೆ. ಇದೀಗ ಗಗನಸಖಿಯರು ಗುಂಪಾಗಿ ಡಾನ್ಸ್ ಮಾಡಿರೋ ವಿಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.

ಏರ್‌ಲೈನ್ಸ್‌ನ ಗಗನಸಖಿಯರು ತಮ್ಮ ಕೆಂಪು ಮತ್ತು ಕಪ್ಪು ಸಮವಸ್ತ್ರವನ್ನು ಧರಿಸಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆಲಾಶುರು ಚಲನಚಿತ್ರದ ಜನಪ್ರಿಯ ಬಂಗಾಳಿ ಗೀತೆ ತಪಾ ಟಿನಿಗೆ ವಿಮಾನ ನಿಲ್ದಾಣದಲ್ಲೇ ಗಗನಸಖಿಯರು ಗುಂಪಾಗಿ ನೃತ್ಯ ಮಾಡಿದ್ದಾರೆ. ಇವರ ಜೊತೆ ಬೆಂಗಾಲಿ ನಟಿ ಮೊನಾಮಿ ಘೋಷ್ ಅವರು ಕೂಡ ಸೇರಿದ್ದಾರೆ.

ಫ್ಲೈಟ್ ಅಟೆಂಡೆಂಟ್‌ಗಳು ಮತ್ತು ನಟಿ ಪರಿಪೂರ್ಣ ರೀತಿಯಲ್ಲಿ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಗಗನಸಖಿಯರು ಚಪ್ಪಾಳೆ ತಟ್ಟುತ್ತಾ ವೃತ್ತಾಕಾರವಾಗಿ ನೃತ್ಯ ಮಾಡುತ್ತಿದ್ದರೆ, ನಟಿ ಮೊನಾಮಿ ಮಧ್ಯದಲ್ಲಿ ನಿಂತು ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋವನ್ನು ನಟಿ ಮೊನಾಮಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ವೀಕ್ಷಣೆ ಹಾಗೂ ಲೈಕ್ಸ್ ಗಳೊಂದಿಗೆ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಗಗನಸಖಿಯರ ಜೊತೆ ನಟಿಯ ನೃತ್ಯವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...