alex Certify ವಿಧಾನಸೌಧದಲ್ಲಿ ಹಣ ಪತ್ತೆ: 40% ಕಮಿಷನ್ ಗೆ ಈ ದುಡ್ಡೇ ದಾಖಲೆಯಲ್ಲವೇ? ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಾನಸೌಧದಲ್ಲಿ ಹಣ ಪತ್ತೆ: 40% ಕಮಿಷನ್ ಗೆ ಈ ದುಡ್ಡೇ ದಾಖಲೆಯಲ್ಲವೇ? ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ಅನಧಿಕೃತ ಹಣ ಪತ್ತೆ ವಿಚಾರ ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಟೀಕಿಸುತ್ತಿದ್ದ ವಿಪಕ್ಷ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. 40% ಕಮಿಷನ್ ಸರ್ಕಾರಕ್ಕೆ ಈ ಹಣವೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ವಿಧಾನಸೌಧದ ಪ್ರತಿ ಗೋಡೆಗೂ ಹಣವಿಲ್ಲದೇ ಏನೂ ನಡೆಯಲ್ಲ. ವಿಧಾನಸೌಧದಲ್ಲಿ ಶೇ.40-50ರಷ್ಟು ಕಮಿಷನ್ ನಡೆಯುತ್ತಿದೆ ಎಂದು ನಮಗೆ ಅನೇಕ ಮಾಹಿತಿಗಳು ಬಂದಿವೆ ಎಂದು ಆರೋಪಿಸಿದರು.

ಈಗ ಸಹಾಯಕ ಇಂಜಿನಿಯರ್ ಅವರ ಬ್ಯಾಗ್ ನಲ್ಲಿ 10.5 ಲಕ್ಷ ಹಣ ಪತ್ತೆಯಾಗಿದೆ. ಮಂತ್ರಿ ಮನೆಯಿಂದ ಕರೆ ಬಂತೆಂದು ಆತನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. 40% ಕಮಿಷನ್ ಗೆ ಈ ದುಡ್ಡೇ ದಾಖಲೆ ಅಲ್ಲವೇ? ಇನ್ನು 60 ದಿನ ಮಾತ್ರ ಈ ಸರ್ಕಾರ, ಏನು ಮಾಡ್ತಾರೆ ಅಂತಾ ನೋಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...