alex Certify ವಿಧಾನಸಭಾ ಫಲಿತಾಂಶಕ್ಕೂ ಮುನ್ನ ಬೇಕರಿಗಳಲ್ಲಿ ಹೆಚ್ಚಿದ ಸ್ವೀಟ್​ ಆರ್ಡರ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಾನಸಭಾ ಫಲಿತಾಂಶಕ್ಕೂ ಮುನ್ನ ಬೇಕರಿಗಳಲ್ಲಿ ಹೆಚ್ಚಿದ ಸ್ವೀಟ್​ ಆರ್ಡರ್​….!

ಪಂಜಾಬ್​ನ ಚುನಾವಣಾ ಫಲಿತಾಂಶಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಪಂಜಾಬ್​ನಾದ್ಯಂತ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಸಿಹಿ ತಿಂಡಿಗಳ ತಯಾರಿ ಬಲುಜೋರಾಗಿ ನಡೆಯುತ್ತಿದೆ. ನಾಳೆಯ ಗೆಲುವಿನ ಆಚರಣೆಗೆ ಸಿದ್ಧವಾಗಿರುವ ಬಹುತೇಕ ರಾಜಕೀಯ ಪಕ್ಷಗಳು ಟನ್​ಗಟ್ಟಲೇ ಲಡ್ಡುಗಳು ಹಾಗೂ ಇತರೆ ಸಿಹಿ ತಿಂಡಿಗಳಿಗೆ ಬೇಡಿಕೆ ಇಟ್ಟಿವೆಯಂತೆ.

ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ವಿವಿಧ ರೀತಿಯ ಲಡ್ಡುಗಳಿಗೆ ಬೇಕರಿಗಳಲ್ಲಿ ಆರ್ಡರ್​ಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಲೂಧಿಯಾನದಲ್ಲಿರುವ ಬೇಕರಿಯೊಂದು ಜೀತ್​ ಕೆ ಲಡ್ಡೂಸ್​( ಗೆಲುವಿನ ಲಡ್ಡು) ತಯಾರಿಸುತ್ತಿದೆ. ಇದರಲ್ಲಿ ಪ್ರತಿಯೊಂದು ಲಡ್ಡು 5 ಕೆಜಿ ತೂಕವನ್ನು ಹೊಂದಿರುತ್ತದೆ. ಪಂಜಾಬ್​ನ ಹಲ್ವಾಯಿ ಅಸೋಸಿಯೇಷನ್​​ನ ಅಧ್ಯಕ್ಷ ನರೀಂದರ್​ ಸಿಂಗ್​ ಈ ವಿಚಾರವಾಗಿ ಮಾತನಾಡಿದ್ದು ಈ ವರ್ಷ ನಾವು ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಗೆಲುವನ್ನು ಸಂಭ್ರಮಿಸಲು ಲಡ್ಡುಗಳ ಆರ್ಡರ್​ನ್ನು ದೊಡ್ಡ ಪ್ರಮಾಣದಲ್ಲಿ ಪಡೆದಿದ್ದೇವೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...