alex Certify ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ….. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ…..

ವಿಟಮಿನ್ ಸಿ ಮಾತ್ರೆ ಸೇವಿಸುತ್ತಿದ್ದರೆ ಈ ವಿಷಯ ನೆನಪಿರಲಿ, ವೈದ್ಯರ ಸಲಹೆ ಪಡೆಯದೆ ನೀವು ಈ ಮಾತ್ರೆಗಳನ್ನು ಸೇವಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ ಸೇವಿಸುವುದರಿಂದ ವಾಂತಿಯ ಲಕ್ಷಣಗಳು ಕಂಡುಬಂದೀತು. ಕೆಲವೊಮ್ಮೆ ವಿಪರೀತ ತಲೆನೋವು, ವಾಕರಿಕೆಯೂ ಕಂಡುಬಂದಾವು. ಈ ಮಾತ್ರೆಗಳನ್ನು ಸೇವಿಸುವ ಬದಲು ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ, ಈ ಕೊರತೆಯನ್ನು ಸರಿದೂಗಿಸಿ.

ಕೆಲವರಿಗೆ ವಿಟಮಿನ್ ಸಿ ಹೆಚ್ಚು ಸೇವಿಸಿದಾಗ ಹೊಟ್ಟೆಯ ಸೆಳೆತದಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಅಬ್ಡಾಮಿನಲ್ ಕ್ರ್ಯಾಂಪ್ ಎಂದೂ ಕರೆಯಲಾಗುತ್ತದೆ. ಹಾಗಾಗಿ ಈ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬೇಡಿ.

ಕೆಲವೊಮ್ಮೆ ಇದರಿಂದ ನಿಮ್ಮ ಹೊಟ್ಟೆ ಹಾಳಾಗಿ, ವಾಂತಿ ಬೇಧಿಯಂಥ ಸಮಸ್ಯೆಗಳು ಕಂಡು ಬರಬಹುದು. ಇದರಿಂದ ನಿಮ್ಮ ದೇಹ ನಿರ್ಜಲೀಕರಣಗೊಳ್ಳಬಹುದು. ಇವುಗಳನ್ನೆಲ್ಲಾ ತಪ್ಪಿಸಲು ನೀವು ವೈದ್ಯರ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...