alex Certify ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿ ಮಾಹಿತಿ ಬಹಿರಂಗ…! ಬಿಳಿ ಬಣ್ಣದ ಕಾರುಗಳೇ ಕಳ್ಳರ ಫೇವರೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿ ಮಾಹಿತಿ ಬಹಿರಂಗ…! ಬಿಳಿ ಬಣ್ಣದ ಕಾರುಗಳೇ ಕಳ್ಳರ ಫೇವರೆಟ್

 

ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದ್ದು, ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಾಹನ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಅದರಲ್ಲೂ ದೆಹಲಿಯ ರೋಹಿಣಿ, ಭಜನ್ ಪುರ್, ಡಯಾಲ್ಪುರ್ ಹಾಗೂ ಸುಲ್ತಾನ್ ಪುರಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಕಳ್ಳತನ ನಡೆದಿದೆ.

ಇನ್ನು ವಾಹನ ಕಳ್ಳರಿಗೆ ಬಿಳಿ ಬಣ್ಣದ ಕಾರುಗಳೇ ಫೇವರೆಟ್ ಎನ್ನಲಾಗಿದ್ದು, ಬಿಳಿ ಬಣ್ಣದ ಕಾರುಗಳು ಟ್ರಾಫಿಕ್ ನಲ್ಲಿ ಹೆಚ್ಚಾಗಿ ಗಮನ ಸೆಳೆಯುವುದಿಲ್ಲ ಎಂಬುದು ಇದರ ಹಿಂದಿನ ತರ್ಕ. ಅಲ್ಲದೆ ಮಾರುತಿ ವ್ಯಾಗನ್ ಆರ್, ಮಾರುತಿ ಸ್ವಿಫ್ಟ್ ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ಅತಿ ಹೆಚ್ಚಾಗಿ ಕದ್ದ ಕಾರುಗಳಾಗಿವೆ.

ವಾಹನ ಕಳ್ಳತನ ಪ್ರಕರಣಗಳಲ್ಲಿ ದೆಹಲಿ ಎನ್ ಸಿ ಆರ್ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕದ ರಾಜಧಾನಿ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ, ತಮಿಳುನಾಡಿನ ಚೆನ್ನೈ ತೃತೀಯ ಸ್ಥಾನದಲ್ಲಿದ್ದು, ಹೈದರಾಬಾದ್, ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಅತಿ ಕಡಿಮೆ ವಾಹನ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ವಾಹನ ಕಳ್ಳತನ ಪ್ರಕರಣಗಳಲ್ಲಿ ಬಹು ಮುಖ್ಯವಾಗಿ ಪಾರ್ಕಿಂಗ್ ಇಲ್ಲದ ಕಾರಣ ಮಹಾನಗರಗಳಲ್ಲಿ ಮನೆ ಹೊರಗೆ ವಾಹನಗಳನ್ನು ನಿಲ್ಲಿಸುವುದು ಒಂದು ಪ್ರಮುಖ ಕಾರಣವಾಗಿದೆ. ಇನ್ನು ಕಳುವಾದ ದ್ವಿಚಕ್ರ ವಾಹನಗಳಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಹೋಂಡಾ ಆಕ್ಟಿವಾ, ಬಜಾಜ್ ಪಲ್ಸರ್, ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಹಾಗೂ ಟಿವಿಎಸ್ ಅಪಾಚಿ ಇದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...