alex Certify ವಾಟ್ಸಾಪ್ ಮೂಲಕ ಬೇಕಾಬಿಟ್ಟಿ ಇಮೋಜಿ ಕಳುಹಿಸಿದ್ರೆ ಈ ದೇಶದಲ್ಲಿ ಜೈಲು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಮೂಲಕ ಬೇಕಾಬಿಟ್ಟಿ ಇಮೋಜಿ ಕಳುಹಿಸಿದ್ರೆ ಈ ದೇಶದಲ್ಲಿ ಜೈಲು….!

ನೀವು ಸೌದಿ ಅರೇಬಿಯಾದಲ್ಲಿದ್ದರೆ ವಾಟ್ಸಾಪ್​ನಲ್ಲಿ ಕೆಂಪು ಹೃದಯದ ಇಮೋಜಿಯನ್ನು ಇನ್ನೊಬ್ಬರಿಗೆ ಕಳುಹಿಸುವುದು ನಿಮ್ಮನ್ನು ಕಾನೂನಿನ ರೀತಿಯಲ್ಲಿ ಸಂಕಷ್ಟಕ್ಕೆ ದೂಡಬಹುದು.

ಗಲ್ಫ್​ ನ್ಯೂಸ್​ ನೀಡಿರುವ ವರದಿಯ ಪ್ರಕಾರ, ಸೌದಿ ಸೈಬರ್ ಕ್ರೈಂ ತಜ್ಞರು ವಾಟ್ಸಾಪ್​ನಲ್ಲಿ ‘ರೆಡ್​ ಹಾರ್ಟ್​’ ಇಮೋಜಿಯನ್ನು ಬಳಸುವ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ವಾಟ್ಸಾಪ್​ನಲ್ಲಿ ರೆಡ್​ ಹಾರ್ಟ್​ ಇಮೋಜಿಯನ್ನು ಕಳುಹಿಸುವುದು ಕಿರುಕುಳಕ್ಕೆ ಸಮಾನವಾಗಿದೆ ಎಂದು ಸೌದಿ ಸೈಬರ್​ ಕ್ರೈಂ ಇಲಾಖೆ ಹೇಳಿದೆ.

ಆನ್​ಲೈನ್​ ಚಾಟ್​ ಸಂದರ್ಭದಲ್ಲಿ ಇಂತಹ ಹಾರ್ಟ್​ ಇಮೋಜಿಯನ್ನು ಕಳುಹಿಸಿದರೆ ಈ ಸಂದೇಶವನ್ನು ಸ್ವೀಕರಿಸಿದ ವ್ಯಕ್ತಿಯು ಕಿರುಕುಳದ ಮೊಕದ್ದಮೆಯನ್ನು ಹೂಡಬಹುದು.

ಸೌದಿ ಕಾನೂನಿನ ಪ್ರಕಾರ ಈ ರೀತಿ ವಾಟ್ಸಾಪ್​ ಚಾಟ್​ ನಡುವೆ ರೆಡ್​ ಹಾರ್ಟ್ ಇಮೋಜಿಯನ್ನು ಕಳುಹಿಸುವವರಿಗೆ 2 ರಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 19,99,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಪದೇ ಪದೇ ಇದೇ ತಪ್ಪನ್ನು ಮಾಡಿರುವುದು ಗಮನಕ್ಕೆ ಬಂದರೆ ದಂಡದ ಮೊತ್ತವು ಇನ್ನಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ.

ಸೌದಿ ಅರೇಬಿಯಾದಲ್ಲಿ ಆನ್​ಲೈನ್​ ಚಾಟ್​ ಮಾಡುವ ವೇಳೆಯಲ್ಲಿ ಈ ರೀತಿ ರೆಡ್​ ಹಾರ್ಟ್​ಗಳನ್ನು ಬಳಕೆ ಮಾಡಿದರೆ ಅದು ಲೈಂಗಿಕತೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಯಲಾಗಿದೆ. ಹೀಗಾಗಿ ಇಂತಹ ತಪ್ಪುಗಳನ್ನು ಮಾಡಿದರೆ ಕಠಿಣ ಶಿಕ್ಷೆಯನ್ನು ಒದಗಿಸಲಾಗುತ್ತದೆ ಎಂದು ಸೌದಿ ಅರೇಬಿಯಾದ ಕ್ರೈಂ ವಿಭಾಗ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...