alex Certify ವರ್ಷದೊಳಗಿನ ಮಕ್ಕಳಿಗೆ ಈ ‘ಆಹಾರ’ ಕೊಡಲೇಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದೊಳಗಿನ ಮಕ್ಕಳಿಗೆ ಈ ‘ಆಹಾರ’ ಕೊಡಲೇಬೇಡಿ

ಮಗುವಿಗೆ 6 ತಿಂಗಳು ತುಂಬಿದ ಮೇಲೆ ಆಹಾರವನ್ನು ಕೊಡಲು ಪೋಷಕರು ಪ್ರಾರಂಭಿಸುತ್ತಾರೆ. ಆದರೆ ಪೋಷಕರು ಆಹಾರವನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು.

ಆಹಾರ ತಜ್ಞರ ಪ್ರಕಾರ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ಪದಾರ್ಥಗಳನ್ನು ಕೊಡಬಾರದು ಎಂಬುದರ ಲಿಸ್ಟ್ ಇಲ್ಲಿದೆ.

ಹಾಲು : ಹಸು ಅಥವಾ ಎಮ್ಮೆ ಹಾಲಿನಲ್ಲಿ ಪ್ರೋಟೀನ್ಸ್ ಮತ್ತು ಮಿನರಲ್ಸ್ ಗಳು ಅತ್ಯಧಿಕವಾಗಿರುವುದರಿಂದ ಮಕ್ಕಳು ಲ್ಯಾಕ್ಟೋಸ್ ಅಸಹಿಷ್ಣುತೆಗೆ ಒಳಗಾಗುತ್ತಾರೆ. ಆದ್ದರಿಂದ ಒಂದು ವರ್ಷದ ಒಳಗಿನ ಮಕ್ಕಳಿಗೆ ತಾಯಿ ಹಾಲು ಅಥವಾ ಫಾರ್ಮುಲಾವನ್ನು ಮಾತ್ರ ಕೊಡಬೇಕು.

ಸಿಟ್ರಸ್ ಹಣ್ಣುಗಳು : ಸ್ಟ್ರಾಬೆರೀಸ್, ರಾಸ್ಪ್ ಬೆರೀಸ್, ಬ್ಲೂಬೆರೀಸ್ ಮತ್ತು ಬ್ಲಾಕ್ ಬೆರೀಸ್ ಹಣ್ಣುಗಳಲ್ಲಿ ಪ್ರೊಟೀನ್ ಅಧಿಕವಿರುವುದರಿಂದ ಮಕ್ಕಳು ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಜೇನು : ಜೇನಿನಲ್ಲಿ ಯಥೇಚ್ಛವಾಗಿ ಬ್ಯಾಕ್ಟೀರಿಯಾ ಇರುವುದರಿಂದ ಮಗುವಿನಲ್ಲಿ ಬೊಟುಲಿಸಮ್ ಗೆ ಕಾರಣವಾಗುತ್ತದೆ. (ಬೊಟುಲಿಸಮ್ ನ ಲಕ್ಷಣಗಳು – ಮಲಬದ್ಧತೆ, ಅಳು, ಹಾಲು ಕುಡಿಯದೇ ಇರುವುದು.}

ಕಡಲೆಬೀಜ : ಇದು ಕೂಡ ಮಕ್ಕಳಲ್ಲಿ ಅಲರ್ಜಿಗೆ ಕಾರಣವಾಗುತ್ತದೆ.

ಕೆಲವು ತರಕಾರಿ : ಸಾಮಾನ್ಯ ತರಕಾರಿಗಳಾದ ಪಾಲಕ್, ಬೀಟ್ರೋಟ್ ನಲ್ಲಿ ನೈಟ್ರೇಟ್ ಪ್ರಮಾಣ ಅಧಿಕವಾಗಿರುವುದರಿಂದ ಮಕ್ಕಳಲ್ಲಿ ಅಜೀರ್ಣಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚು ವಿಟಮಿನ್ಸ್ ಇರುವ ತರಕಾರಿಗಳನ್ನು ಕೊಡುವುದು ಉತ್ತಮ. ಹೆಚ್ಚು ನೈಟ್ರೇಟ್ ಇರುವ ತರಕಾರಿಗಳನ್ನು ತ್ಯಜಿಸಬೇಕು.

ಉಪ್ಪು : ಮಕ್ಕಳಿಗೆ ದಿನಕ್ಕೆ ಒಂದು ಗ್ರಾಂ ನಷ್ಟು ಮಾತ್ರ ಉಪ್ಪಿನ ಅವಶ್ಯಕತೆ ಇದೆ. ಅದು ಎದೆ ಹಾಲಿನಲ್ಲಿ ಅಥವಾ ಫಾರ್ಮುಲಾದಲ್ಲಿ ಸಿಗುತ್ತದೆ. ಮಕ್ಕಳ ಕಿಡ್ನಿಗಳು ಇನ್ನೂ ಸರಿಯಾಗಿ ಅಭಿವೃದ್ಧಿಯಾಗದ ಕಾರಣ ಹೆಚ್ಚಿನ ಉಪ್ಪನ್ನು ಪ್ರಕ್ರಿಯೆಗೊಳಿಸಲು ಕಷ್ಟವಾಗುತ್ತದೆ.

ನಟ್ಸ್ : ನಟ್ಸ್ ಗಳು ಮಕ್ಕಳಿಗೆ ಅಲರ್ಜಿಯಾದ ಕಾರಣ ಕೊಡಲೇಬಾರದು.

ಚಾಕೊಲೇಟ್ : ಎಲ್ಲಾ ಮಕ್ಕಳಿಗೆ ಚಾಕೊಲೇಟ್ ಇಷ್ಟವಾಗುತ್ತದೆ. ಅದರಲ್ಲಿ ಕೆಫಿನ್ ಅಂಶ ಇರುವುದರಿಂದ ಮಕ್ಕಳ ಬೆಳೆವಣಿಗೆಗೆ ಪರಿಣಾಮ ಬೀರುತ್ತದೆ.

ಪಾಪ್ ಕಾರ್ನ್ : ಪಾಪ್ ಕಾರ್ನ್ ಮಧ್ಯದ ಭಾಗ ಗಟ್ಟಿಯಾಗಿರುವುದರಿಂದ ಅನ್ನನಾಳದಲ್ಲಿ ಕರಗಲು ಕಷ್ಟವಾಗಿ ತೊಂದರೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...