alex Certify ವರದಿಗಾರ್ತಿಯ ನಾಟಕೀಯ ಉಕ್ರೇನ್ ಕವರೇಜ್ ವಿಡಿಯೋ ವೈರಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರದಿಗಾರ್ತಿಯ ನಾಟಕೀಯ ಉಕ್ರೇನ್ ಕವರೇಜ್ ವಿಡಿಯೋ ವೈರಲ್….!

All sorts of remixes and edits have been made out of the situation. (Screengrab via Twitter)ಉಕ್ರೇನ್ ಮೇಲೆ ರಷ್ಯಾದ ಯುದ್ಧವು ಮುಂದುವರಿಯುತ್ತಲೇ ಇದೆ. ಈ ಯುದ್ಧದ ಕುರಿತು ಉಕ್ರೇನ್‌ನಿಂದ ಭಾರತೀಯ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರು ವರದಿ ಮಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರಿಪೋರ್ಟರ್ ವರದಿ ಮಾಡುತ್ತಿರುವ ರೀತಿ ಟ್ವಿಟ್ಟರ್‌ನಲ್ಲಿ ಹಲವಾರು ಮೀಮ್‌ಗಳನ್ನು ಸೃಷ್ಟಿಸಲಾಗಿದೆ. ಅನೇಕ ಜನಪ್ರಿಯ ಬಾಲಿವುಡ್ ಹಾಡುಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ. ಯುದ್ಧದಿಂದ ಹಾನಿಗೊಳಗಾದ ಉಕ್ರೇನ್‌ನಿಂದ ಆಕೆ ವರದಿ ಮಾಡುತ್ತಿದ್ದಳು.

ವರದಿ ಮಾಡುವಾಗ ಕೆಲವು ನಾಟಕೀಯ ಸನ್ನೆಗಳೊಂದಿಗೆ ಸುದ್ದಿಯನ್ನು ಪ್ರಸ್ತುತಪಡಿಸಿದ್ದಾರೆ. ಈ ವೇಳೆ ಹೆಲಿಕಾಪ್ಟರ್ ಗ್ರಾಫಿಕ್ಸ್ ಅನ್ನು ಕೂಡ ಸೇರಿಸಲಾಗಿದೆ. ಈ ವಿಡಿಯೋವನ್ನು ನೆಟ್ಟಿಗರು ತಮಾಷೆಯಾಗಿ ಕಂಡಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಮೀಮ್ ಗಳ ಸುರಿಮಳೆಯನ್ನೇ ಸೃಷ್ಟಿಸಿದ್ದಾರೆ.

ಇನ್ನು, ನಾಯಕರ ನಿರ್ಧಾರಗಳಿಗೆ ತಲೆಕೊಡದೆ ಶೀಘ್ರವಾಗಿ ಶಸ್ತ್ರಗಳನ್ನು ತ್ಯಜಿಸಿ ಮಾತುಕತೆಗೆ ಬರುವಂತೆ ಉಕ್ರೇನ್‌ ಪಡೆಗಳಿಗೆ ರಷ್ಯಾ ಕರೆ ನೀಡಿದೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ, ಮಾರಿಯುಪೋಲ್‌ ರಕ್ಷಣೆಗೆ ನಿಂತಿರುವ ಉಕ್ರೇನ್ ಯೋಧರು ಶಸ್ತ್ರ ತ್ಯಜಿಸಿ ಮಾತುಕತೆಗೆ ಬಂದರೆ ಸ್ವಾಗತಿಸುವುದಾಗಿ ಹೇಳಿದೆ.

— Arun Bothra 🇮🇳 (@arunbothra) April 18, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...