alex Certify ವಧು-ವರನ ಓಟ ಕಂಡು ಅಚ್ಚರಿಗೊಂಡ ಜನ: ಈ ವೈರಲ್ ವಿಡಿಯೋ ವೀಕ್ಷಿಸಿದ್ದು 12.4 ಮಿಲಿಯನ್ ಮಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧು-ವರನ ಓಟ ಕಂಡು ಅಚ್ಚರಿಗೊಂಡ ಜನ: ಈ ವೈರಲ್ ವಿಡಿಯೋ ವೀಕ್ಷಿಸಿದ್ದು 12.4 ಮಿಲಿಯನ್ ಮಂದಿ

Viral Video: Newly-wed Bride and Groom's Running Race Leaves People Surprised | WATCHದೇಶದಲ್ಲಿ ಬಿಸಿಲು ಹೆಚ್ಚಾಗಿದ್ದರೂ ಕೂಡ ವಿವಾಹದ ಸೀಸನ್ ಇದಾಗಿದೆ. ಮದುವೆ ಸಮಾರಂಭದ ತಮಾಷೆ ಮತ್ತು ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಇದೀಗ, ಮತ್ತೊಂದು ಮದುವೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದು ವಧು ಮತ್ತು ವರ ತಮ್ಮ ಮದುವೆಯ ಉಡುಪು ಧರಿಸಿ ರೇಸಿಂಗ್ ನಲ್ಲಿ ಪಾಲ್ಗೊಂಡಂತೆ ತೋರಿಸುತ್ತದೆ. ಆರ್‌ಕೆ ಖಾನ್ ಎಂಬ ಬಳಕೆದಾರರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ ಕ್ರೇಜಿ ವೈರಲ್ ಆಗಿದೆ.

ನವವಿವಾಹಿತ ವಧು-ವರ ತಮ್ಮ ಮದುವೆಯ ದಿರಿಸುಗಳಲ್ಲಿ ಹಳ್ಳಿಯ ರಸ್ತೆಯಲ್ಲಿ ಓಡುತ್ತಿರುವುದನ್ನು ತೋರಿಸುತ್ತದೆ. ವಧು-ವರನ ಜೊತೆಗೆ ಇನ್ನೂ ಕೆಲವರು ಓಟಕ್ಕಿತ್ತಿದ್ದಾರೆ. ವಿಡಿಯೋವನ್ನು ನೋಡಿದರೆ, ವಧು-ವರನನ್ನು ಬಿಟ್ಟು ವಾಹನ ಮುಂದೆ ಸಾಗಿದೆ. ಇದರಿಂದ ಕಂಗೆಟ್ಟ ವಧು-ವರ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಂತೆ ಎದ್ನೋ ಬಿದ್ನೋ ಎಂಬಂತೆ ವಾಹನದ ಹಿಂದೆ ಓಡಿದ್ದಾರೆ.

ಈ ವೈರಲ್ ವಿಡಿಯೋವನ್ನು 12.4 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಹಾಗೂ ಸಾವಿರಾರು ಲೈಕ್ಸ್ ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಕೆಲವರು ವಧು-ವರನ ರೇಸಿಂಗ್ ಕಂಡು ಬಿದ್ದು ಬಿದ್ದು ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...