alex Certify ವಧುವಿನ ತಂಗಿಯ ʼʼಚುನರಿ ಚುನರಿʼ ನೃತ್ಯಕ್ಕೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿನ ತಂಗಿಯ ʼʼಚುನರಿ ಚುನರಿʼ ನೃತ್ಯಕ್ಕೆ ಮನಸೋತ ನೆಟ್ಟಿಗರು

ಭಾರತದಲ್ಲೀಗ ಮದುವೆ ಸೀಸನ್‌. ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮಗಳ ಮನರಂಜಿಸುವ ವಿಡಿಯೋಗಳಿಗೆ ಕೊರತೆ ಇಲ್ಲ. ಇವುಗಳಲ್ಲಿ ಕೆಲವು ವಿಡಿಯೋಗಳು ವೈರಲ್‌ ಆಗಿದ್ದು, ಜನಮೆಚ್ಚುಗೆ ಗಳಿಸಿವೆ. ಅಂತಹ ಒಂದು ವಿಡಿಯೋ ತುಣುಕು ಈ ಸಂಗೀತ ರಾತ್ರಿ ಕಾರ್ಯಕ್ರಮದ್ದು ಇನ್‌ಸ್ಟಾಗ್ರಾಂನಲ್ಲಿ ವೀಕ್ಷಕರ ಗಮನಸೆಳೆದಿದೆ.

ವಿವಾಹ ಎಂದಾಗ ಸಹಜವಾಗಿ, ವಧುವಿನ ಸಹೋದರಿಯರು ಮತ್ತು ಸ್ನೇಹಿತರ ನೃತ್ಯ ಪ್ರದರ್ಶನ ಇದ್ದೇ ಇರುತ್ತದೆ. ಇದು ಅತ್ಯಂತ ವಿಶೇಷ ಮತ್ತು ವಿಶಿಷ್ಟ. ಇದಕ್ಕಾಗಿಯೇ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುವುದು ಇಂದು ರೂಢಿಯಾಗುತ್ತಿದೆ. ಇಂತಹ ಒಂದು ಸಂಗೀತ ಕಾರ್ಯಕ್ರಮದ ವಿಡಿಯೋ ತುಣುಕು ಇನ್‌ಸ್ಟಾಗ್ರಾಂನಲ್ಲಿದೆ. ಇದರಲ್ಲಿ ವಧುವಿನ ಸಹೋದರಿಯ ನೃತ್ಯ ಮನಮೋಹಕವಾಗಿದೆ.

BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ

ವಿಡಿಯೊದಲ್ಲಿ, ಸುಂದರವಾದ ಲೆಹೆಂಗಾಗಳಲ್ಲಿ ಕಾಣಿಸಿಕೊಂಡಿರುವ ಸುಂದರಿಯರ ನಡುವೆ, ವಧುವಿನ ತಂಗಿಯ ನೃತ್ಯದ ದೃಶ್ಯವಿದೆ. ಪರಿಪೂರ್ಣ ನೃತ್ಯ ಸಂಯೋಜನೆ ಮತ್ತು ಸುಂದರ ನಗುವಿನೊಂದಿಗೆ ನೃತ್ಯ ಪ್ರದರ್ಶನ ಆಯೋಜನೆಯಾಗಿದೆ.

ಪೆಪ್ಪಿ ಸಾಂಗ್‌ಗೆ ಈ ಸುಂದರಿಯರು ನೃತ್ಯಮಾಡುವಾಗ ಅತಿಥಿಗಳು ಹುರಿದುಂಬಿಸುವ ಧ್ವನಿ ಕೂಡ ಕೇಳುತ್ತದೆ. ಅನೇಕರು ಈ ನೃತ್ಯದ ವಿಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿರುವುದೂ ಕಂಡುಬಂದಿದೆ.

ಡ್ಯಾನ್ಸ್ ಸ್ವಾಗ್ 360 ಎಂಬ ಇನ್‌ಸ್ಟಾಗ್ರಾಮ್ ಪುಟವು ವಿಡಿಯೊವನ್ನು ಶೇರ್‌ ಮಾಡಿಕೊಂಡಿದೆ. ಅದಕ್ಕೊಂದು ಶೀರ್ಷಿಕೆ “ಸಹೋದರಿಯಿಂದ ಸುಂದರ ನೃತ್ಯ ಪ್ರದರ್ಶನ. ನಿಮ್ಮ ಸ್ಟೋರಿಯನ್ನೂ ಶೇರ್‌ ಮಾಡಿ” ಈ ವಿಡಿಯೊ 88,000 ಕ್ಕೂ ಹೆಚ್ಚು ಸಲ ವೀಕ್ಷಿಸಲ್ಪಟ್ಟಿದೆ. ವಿಭಿನ್ನ ಪ್ರತಿಕ್ರಿಯೆಗಳನ್ನೂ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...