alex Certify ವಂಚನೆ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ‘ರಾ…..ರಾ…. ರುಕ್ಕಮ್ಮ’ ಬೆಡಗಿ ಜಾಕ್ವೆಲಿನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚನೆ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ‘ರಾ…..ರಾ…. ರುಕ್ಕಮ್ಮ’ ಬೆಡಗಿ ಜಾಕ್ವೆಲಿನ್

Jacqueline Fernandez did not appear before the ED | 200 ಕೋಟಿ ರೂ. ವಂಚನೆ  ಉರುಳು; ವಿಚಾರಣೆ ಗೈರಾದ ಕಿಚ್ಚನ ನಾಯಕಿ– News18 Kannadaಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ನಡೆಸಿರುವ ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಂಕಷ್ಟ ಎದುರಾಗಿದೆ. ಇವರನ್ನು ಆರೋಪಿಯನ್ನಾಗಿ ಮಾಡಿ ಇಡಿ ಅಧಿಕಾರಿಗಳು ದೆಹಲಿ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಬರೋಬ್ಬರಿ 215 ಕೋಟಿ ರೂಪಾಯಿ ಹಣವನ್ನು ಸುಕೇಶ್ ವಂಚಿಸಿದ್ದಾನೆ ಎನ್ನಲಾಗುತ್ತಿದ್ದು, ಈ ಹಣದಲ್ಲಿ ತನ್ನ ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ದುಬಾರಿ ಬೆಲೆಯ ಕಾರು, ಡೈಮಂಡ್, ವಾಚ್, ಬ್ಯಾಗುಗಳನ್ನು ಕಾಣಿಕೆಯಾಗಿ ನೀಡಿದ್ದ. ಈ ಸಂಗತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಗಮನಕ್ಕೆ ಬಂದಿತ್ತು.

ಬಳಿಕ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದು, ಇದೀಗ ಚಾರ್ಜ್ ಶೀಟ್ ನಲ್ಲಿ ನಟಿಯನ್ನೂ ಆರೋಪಿಯನ್ನಾಗಿಸಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ‘ರಾ….ರಾ….. ರುಕ್ಕಮ್ಮ’ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದ ಜಾಕ್ವೆಲಿನ್ ಕೋರ್ಟ್ ಕಟಕಟೆ ಏರುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...