alex Certify ಲಿಫ್ಟ್‌ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ, ಚಲಿಸ್ತಾ ಇದ್ದ ಕಾರಿನಿಂದ್ಲೇ ಜಿಗಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಫ್ಟ್‌ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ, ಚಲಿಸ್ತಾ ಇದ್ದ ಕಾರಿನಿಂದ್ಲೇ ಜಿಗಿದ ಯುವತಿ

ಲಖ್ನೋನಲ್ಲಿ ಲೈಂಗಿಕ ಕಿರುಕುಳ ಕೊಡ್ತಾ ಇದ್ದ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸ್ತಾ ಇದ್ದ ಕಾರಿನಿಂದ ಹೊರಕ್ಕೆ ಹಾರಿದ್ದಾಳೆ. ಜಾನೇಶ್ವರ್‌ ಮಿಶ್ರಾ ಪಾರ್ಕ್‌ ಬಳಿ ಈ ಘಟನೆ ನಡೆದಿದ್ದು, ಗಾಯಗೊಂಡಿರೋ ಯುವತಿಯನ್ನು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹೋಟೆಲ್‌ಗೆ ಬಂದಿದ್ದ ಯುವತಿ ಅಲ್ಲಿಂದ ಮನೆಗೆ ಮರಳ್ತಾ ಇದ್ಲು. ಈ ವೇಳೆ ಎಸ್‌ಯುವಿಯಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಗೆ ಲಿಫ್ಟ್‌ ಕೊಡುವುದಾಗಿ ಹೇಳಿದ್ದಾನೆ. ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡ ಆತ ಸ್ವಲ್ಪ ದೂರ ತೆರಳುತ್ತಿದ್ದಂತೆ ಆಕೆಗೆ ಲೈಂಗಿಕ ಕಿರುಕುಳ ಕೊಡಲು ಆರಂಭಿಸಿದ್ದಾನೆ.

ಆಕೆಯ ಹತ್ತಿರ ಬಂದು ಸ್ಪರ್ಷಿಸಲು ಶುರುವಿಟ್ಟುಕೊಂಡಿದ್ದ. ಇದರಿಂದ ಬೆದರಿದ ಯುವತಿ ಮಾನ ಕಾಪಾಡಿಕೊಳ್ಳಲು ಬೇರೆ ದಾರಿ ಕಾಣದೆ ಕಾರಿನ ಬಾಗಿಲು ತೆರೆದು ಕೆಳಕ್ಕೆ ಹಾರಿದ್ದಾಳೆ. ಇದನ್ನು ಗಮನಿಸಿದ ವಾಹನ ಸವಾರರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ರು. ಘಟನೆ ಬಳಿಕ ಆಕೆಗೆ ಪ್ರಜ್ಞೆಯೇ ಇರಲಿಲ್ಲ.

ಗುಣಮುಖಳಾದ ಬಳಿಕ ಯುವತಿ ಪೊಲೀಸರಿಗೆ ಆರೋಪಿ ಬಗ್ಗೆ ವಿವರ ನೀಡಿದ್ದಾಳೆ. ವಿಶೇಷ ತಂಡ ರಚಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಈಗಾಗ್ಲೇ ಕಾಮುಕನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...