alex Certify ಲಾರಿಗೆ ಸಿಕ್ಕು ಅಪ್ಪಚ್ಚಿಯಾಗ್ತಿದ್ದ ಮಗು ಪವಾಡ ಸದೃಶ್ಯ ರೀತಿಯಲ್ಲಿ ಪಾರು; ಎದೆ ನಡುಗಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾರಿಗೆ ಸಿಕ್ಕು ಅಪ್ಪಚ್ಚಿಯಾಗ್ತಿದ್ದ ಮಗು ಪವಾಡ ಸದೃಶ್ಯ ರೀತಿಯಲ್ಲಿ ಪಾರು; ಎದೆ ನಡುಗಿಸುವ ವಿಡಿಯೋ ವೈರಲ್

ಗಟ್ಟಿ ಗುಂಡಿಗೆಯವರನ್ನೂ ಗಡಗಡ ನಡುಗಿಸುವಂಥ ಘಟನೆ ಇದು. ನಡೆದಿರೋದು ಸದಾ ಬ್ಯುಸಿಯಾಗಿರೋ ಮುಖ್ಯ ರಸ್ತೆಯೊಂದರಲ್ಲಿ. ಪಕ್ಕದಲ್ಲೆಲ್ಲೋ ಆಟವಾಡ್ತಿದ್ದ ಪುಟ್ಟ ಮಗುವೊಂದು ಇದ್ದಕ್ಕಿದ್ದಂತೆ ರೋಡಿನತ್ತ ಓಡಿ ಬಂದಿದೆ.

ಮುಂದೇನಾಗಬಹುದು ಅನ್ನೋ ಕಲ್ಪನೆ ಕೂಡ ಅಲ್ಲಿದ್ದವರಿಗಿಲ್ಲ. ಆದ್ರೆ ಮಗು ರಸ್ತೆಗೆ ಓಡ್ತಿರೋದನ್ನು ವ್ಯಕ್ತಿಯೊಬ್ಬ ಗಮನಿಸಿದ್ದ. ಕ್ಷಣಮಾತ್ರವೂ ತಡಮಾಡದೇ ಆತ ಮಗುವಿನ ಹಿಂದೆಯೇ ಓಡಿ ಬಂದಿದ್ದಾನೆ.

ಮಗುವನ್ನು ಒಂದೇ ಕೈಯಲ್ಲಿ ಎತ್ತಿ ತನ್ನತ್ತ ಸೆಳೆದುಕೊಂಡಿದ್ದಾನೆ. ಇನ್ನೊಂದು ಸೆಕೆಂಡ್‌ ತಡವಾಗಿದ್ದರೂ ಮಗು ವೇಗವಾಗಿ ಬರ್ತಾ ಇದ್ದ ಲಾರಿ ಅಡಿ ಸಿಕ್ಕು ಅಪ್ಪಚ್ಚಿಯಾಗಿ ಹೋಗ್ತಿತ್ತು. ಕೂದಲೆಳೆ ಅಂತರದಲ್ಲಿ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಮಗು ಬಚಾವ್‌ ಆಗಿರೋದನ್ನು ನೋಡಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ತನ್ನ ಪ್ರಾಣವನ್ನೂ ಲೆಕ್ಕಿಸದೇ ಮಗುವನ್ನು ರಕ್ಷಿಸಿದ ವ್ಯಕ್ತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...