alex Certify ಲವ್ ಬ್ರೇಕಪ್ ಗೆ ಈ ಹವ್ಯಾಸಗಳೇ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್ ಬ್ರೇಕಪ್ ಗೆ ಈ ಹವ್ಯಾಸಗಳೇ ಕಾರಣ

ಸಂಬಂಧಗಳು ಒಗಟುಗಳಿದ್ದಂತೆ, ಅದನ್ನು ಬಿಡಿಸಲು ಸಮಯ, ಶ್ರಮ ಮತ್ತು ತಾಳ್ಮೆ ಎಲ್ಲವೂ ಬೇಕು. ಸಾವಿರಾರು ಕನಸುಗಳು ಕಲ್ಪನೆಗಳೊಂದಿಗೆ ಹುಟ್ಟಿಕೊಂಡ ಪ್ರೀತಿ ದಿನಕಳೆದಂತೆ ಕಡಿಮೆಯಾಗುವುದು ಸಹಜ. ಅದ್ಯಾಕೆ ಅನ್ನೋ ಪ್ರಶ್ನೆ ಕೂಡ ನಮ್ಮನ್ನು ಕಾಡುತ್ತದೆ.

ಪತಿ-ಪತ್ನಿ ಮಧ್ಯೆ ವಿರಸ, ಪ್ರೇಮಿಗಳ ನಡುವೆ ಮುನಿಸು, ಸಂಬಂಧಗಳಲ್ಲಿ ಬಿರುಕು ಇವಕ್ಕೆಲ್ಲ ಕೆಲವೊಂದು ಹವ್ಯಾಸಗಳು ಕೂಡ ಕಾರಣವಾಗುತ್ತವೆ.

ಮಾಜಿ ಪ್ರೇಯಸಿ ಅಥವಾ ಪ್ರಿಯಕರನೊಂದಿಗೆ ಸಂಪರ್ಕ: ನಿಮ್ಮ ಸಂಬಂಧ ಗಟ್ಟಿಯಾಗಿರಬೇಕಂದ್ರೆ ಹಳೆಯ ಪ್ರೇಯಸಿ ಅಥವಾ ಪ್ರಿಯಕರನನ್ನು ನೀವು ಮರೆತುಬಿಡಬೇಕು. ಮಾಜಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಪ್ರಯತ್ನಿಸಬೇಡಿ. ಯಾಕಂದ್ರೆ ಅದು ನಿಮ್ಮ ಸಂಗಾತಿಗೆ ಇಷ್ಟವಾಗುವುದಿಲ್ಲ. ಯಾವುದೇ ಕಾರಣಕ್ಕೂ ಮಾತಿನ ಭರದಲ್ಲಿ ನಿಮ್ಮ ಮಾಜಿ ಗೆಳೆಯ ಅಥವಾ ಗೆಳತಿಯ ಪ್ರಸ್ತಾಪ ಮಾಡಬೇಡಿ.

ಹಳೆಯ ತಪ್ಪನ್ನೇ ಮತ್ತೆ ಮಾಡುವುದು : ನಿಮ್ಮ ಸಂಗಾತಿಗೆ ನೋವು ಕೊಡುವಂತಹ ಸಂಗತಿಗಳನ್ನು ಮತ್ತೆ ಮತ್ತೆ ಮಾಡಬೇಡಿ. ಈ ಹಿಂದೆ ಅಂತಹ ತಪ್ಪನ್ನು ಮಾಡಿದ್ದರೆ ಅದಕ್ಕೆ ನಿಮಗೆ ಕ್ಷಮೆ ಸಿಕ್ಕಿದೆ ಅನ್ನೋದನ್ನು ನೆನಪಿಟ್ಟುಕೊಳ್ಳಿ. ಮತ್ತದೇ ತಪ್ಪನ್ನು ರಿಪೀಟ್ ಮಾಡಿದರೆ ಸಂಬಂಧ ಹದಗೆಡುವುದರಲ್ಲಿ ಅನುಮಾನವಿಲ್ಲ. ಭವಿಷ್ಯದ ಮೇಲೆ ಪರಿಣಾಮ ಬೀರುವಂತಹ ಹಳೆ ವಿಚಾರಗಳನ್ನು ಚರ್ಚಿಸದೇ ಇರುವುದು ಉತ್ತಮ.

ಸಂಗಾತಿಯ ಬಗ್ಗೆ ಗಮನಹರಿಸದಿರುವುದು : ನಿಮ್ಮ ಸಂಗಾತಿಯ ಜೊತೆಗೆ ಹೆಚ್ಹೆಚ್ಚು ಸಮಯ ಕಳೆಯಿರಿ. ಸಣ್ಣ ಪುಟ್ಟ ಸಂಗತಿಗಳನ್ನೂ ಗಮನಿಸಿ, ಪರಸ್ಪರ ಚರ್ಚಿಸಿ. ಆಗ ಮಾತ್ರ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

ಹೋಲಿಕೆ ಮಾಡುವುದು : ಪ್ರೇಮಿಗಳು ಅಥವಾ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡಲು ಇದೊಂದು ಪ್ರಮುಖ ಕಾರಣ. ವರ್ತಮಾನ ಕಾಲವನ್ನು ಭೂತಕಾಲದೊಂದಿಗೆ ಹೋಲಿಸುವ ತಪ್ಪನ್ನು ಮಾಡಲೇಬೇಡಿ. ಸಮಯ ಬದಲಾದಂತೆ ಎಲ್ಲವೂ ಬದಲಾಗುವುದು ಸಹಜ. ನಿಮ್ಮ ಮಾಜಿ ಪ್ರೇಯಸಿ ಅಥವಾ ಪ್ರಿಯತಮನೊಂದಿಗೆ ಸಂಗಾತಿಯನ್ನು ಹೋಲಿಕೆ ಮಾಡಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...