alex Certify ಲತಾ ಮಂಗೇಶ್ಕರ್​ ಅಂತ್ಯಕ್ರಿಯೆ ವೇಳೆ ಶಾರೂಕ್​ ಜೊತೆಯಲ್ಲಿ ಕಾಣಿಸಿಕೊಂಡ ಮಹಿಳೆ ಯಾರು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲತಾ ಮಂಗೇಶ್ಕರ್​ ಅಂತ್ಯಕ್ರಿಯೆ ವೇಳೆ ಶಾರೂಕ್​ ಜೊತೆಯಲ್ಲಿ ಕಾಣಿಸಿಕೊಂಡ ಮಹಿಳೆ ಯಾರು ಗೊತ್ತಾ..?

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್​ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಬಾಲಿವುಡ್​​ ನಟ ಶಾರೂಕ್​ ಖಾನ್​ ಸಾಕಷ್ಟು ವಿಚಾರಗಳಿಂದಾಗಿ ಇಂದು ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.

ಮುಂಬೈನ ದಾದರ್​ನಲ್ಲಿರುವ ಶಿವಾಜಿ ಪಾರ್ಕ್​ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಅವರು ಭಾಗಿಯಾಗಿದ್ದರು. ತಮ್ಮ 92ನೇ ವರ್ಷ ವಯಸ್ಸಿನಲ್ಲಿ ಇಹಲೋಕ ಯಾತ್ರೆಯನ್ನು ಮುಗಿಸಿದ ಲತಾ ಮಂಗೇಶ್ಕರ್​ ನಿಧನಕ್ಕೆ ಪ್ರಧಾನಿ ಮೋದಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ನಮನ ಸೂಚಿಸಲು ಶಿವಾಜಿ ಪಾರ್ಕ್​ನಲ್ಲಿ ಸೇರಿದ್ದರು.

ಈ ಸಂದರ್ಭದಲ್ಲಿ ನಟ ಶಾರೂಕ್​ ಖಾನ್, ಲತಾ ಮಂಗೇಶ್ಕರ್​ಗೆ ಅಂತಿಮ ನಮನ ಸಲ್ಲಿಸುತ್ತಿರುವ ಫೋಟೋಗಳು ವೈರಲ್​ ಆಗಿವೆ. ಶಾರೂಕ್​ ಖಾನ್​ ಪತ್ನಿ ಗೌರಿ ಖಾನ್​ ಜೊತೆಯಲ್ಲಿ ಲತಾ ಮಂಗೇಶ್ಕರ್​ ಅಂತಿಮ ನಮನಕ್ಕೆ ಬಂದಿದ್ದಾರೆ ಎಂದು ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಲತಾ ಮಂಗೇಶ್ಕರ್​ ಅಂತ್ಯಕ್ರಿಯೆಯಲ್ಲಿ ಶಾರೂಕ್​ ಜೊತೆಯಿದ್ದ ಮಹಿಳೆ ಯಾರು..?

ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ, ಉಪ ಮುಖ್ಯಮಂತ್ರಿ ಅಜಿತ್​ ಪವಾರ್​, ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​, ಸೆಲೆಬ್ರಿಟಿಗಳಾದ ಶಾರೂಕ್​ ಖಾನ್​, ಸಚಿನ್​ ತೆಂಡೂಲ್ಕರ್​, ರಣಬೀರ್​ ಕಪೂರ್​, ಜಾವೇದ್ ಅಖ್ತರ್​ ಹೀಗೆ ಸಾಕಷ್ಟು ಮಂದಿ ಲತಾ ಮಂಗೇಶ್ಕರ್​ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.

ಶಾರೂಕ್​ ಖಾನ್​ ಜೊತೆಯಲ್ಲಿಯೇ ಲತಾ ಮಂಗೇಶ್ಕರ್​ ಅಂತಿಮ ದರ್ಶನಕ್ಕೆ ತೆರಳಿದ ಮಹಿಳೆಯು ಹಿಂದೂ ಸಂಪ್ರದಾಯದಂತೆ ಲತಾಜಿ ಪಾರ್ಥಿವ ಶರೀರಕ್ಕೆ ನಮಿಸಿದರು. ಟ್ವಿಟರ್​ನಲ್ಲಿ ಇವರು ಗೌರಿ ಖಾನ್​ ಎಂದು ಸುದ್ದಿಯಾದ ಹಿನ್ನೆಲೆಯಲ್ಲಿ ಪ್ರಸ್ತುತ ಗೌರಿ ಖಾನ್​ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ.

ಅಂದಹಾಗೆ ಇವರು ಶಾರೂಕ್​ ಪತ್ನಿ ಗೌರಿ ಖಾನ್​ ಅಲ್ಲ ಬದಲಾಗಿ ಶಾರೂಕ್​ ಮ್ಯಾನೇಜರ್​​ ಪೂಜಾ ದದ್ಲಾನಿ ಆಗಿದ್ದಾರೆ. ಪೂಜಾ ಹಾಗೂ ಶಾರೂಕ್​ ಜೊತೆಯಾಗಿ ಬಂದು ಲತಾ ಮಂಗೇಶ್ಕರ್​​ರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಶಾರೂಕ್​ ಹಾಗೂ ಪೂಜಾರ ಫೋಟೋ ವೈರಲ್​ ಆಗುವುದರ ಹಿಂದೆ ಬಲವಾದ ಕಾರಣ ಕೂಡ ಇದೆ. ಈ ಫೋಟೋವು ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ತೋರಿಸುವಂತಿದೆ ಎಂದು ಅನೇಕರು ವರ್ಣಿಸಿದ್ದಾರೆ.

ಯಾರು ಈ ಪೂಜಾ ದದ್ಲಾನಿ..?

ಪೂಜಾ ದದ್ಲಾನಿ 2012ರಿಂದ ಶಾರೂಕ್​ ಖಾನ್​ ಮ್ಯಾನೇಜರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ ಸರಿ ಸುಮಾರು 1 ದಶಕದಿಂದ ಅವರು ಶಾರೂಕ್​ ಜೊತೆಯಲ್ಲಿ ಇದ್ದಾರೆ. ಮುಂಬೈನಲ್ಲಿ ಎನ್​ಸಿಬಿ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ರನ್ನು ಬಂಧಿಸಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಪೂಜಾ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು.

ಪೂಜಾ, ಶಾರೂಕ್​ ಖಾನ್​, ಗೌರಿ ಖಾನ್​, ಆರ್ಯನ್​ ಖಾನ್​ ಹಾಗೂ ಸುಹಾನಾ ಖಾನ್​ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಪೂಜಾ ಶಾರೂಕ್​ ಕುಟುಂಬದ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...